ಬಿಕಾನೇರ್: ಕೆಲವರಿಗೆ ಏನಾದರೂ ಭಿನ್ನವಾಗಿ ಮಾಡಿ ಗಮನ ಸೆಳೆಯಬೇಕೆಂಬ ತುಡಿತ ಇರುತ್ತದೆ. ಇಂತಹ ತುಡಿತ ಹೊಂದಿದ್ದ ರಾಜಸ್ತಾನದ ಬೀದಿ ಬದಿ ವ್ಯಾಪಾರಿಯೊಬ್ಬರು, ಬೃಹತ್ ಗಾತ್ರದ ಸಮೋಸಾ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಧರ್ಮೇಂದ್ರ ಅಗರ್ ವಾಲ್ ಎಂಬ ಬೀದಿ ವ್ಯಾಪಾರಿಯೊಬ್ಬರು, ಬರೋಬ್ಬರಿ 15 ಕೆ.ಜಿ.ತೂಕದ ಸಮೋಸ ತಯಾರಿಸಿ ಗಮನ ಸೆಳೆದಿದ್ದಾರೆ. ಪಾನಿಪುರಿ, ದಹಿಪುರಿ ಮೊದಲಾದ 12 ಬಗೆ ತಿನಿಸುಗಳನ್ನು ತಯಾರಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿರುವ ಧರ್ಮೇಂದ್ರ ಅಗರ್ ವಾಲ್, ಈ ಬಾರಿ 15 ಕೆ.ಜಿ.ತೂಕದ ಸಮೋಸ ತಯಾರಿಸಿ ಗಮನ ಸೆಳೆದಿದ್ದಾರೆ. ಈ ಸಮೋಸಕ್ಕೆ ಫ್ಯಾಮಿಲಿ ಸಮೋಸ ಎಂದು ಹೆಸರಿಡಲಾಗಿದ್ದು, ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸಲಾಗಿದೆ.
ಧರ್ಮೇಂದ್ರ ಅಗರ್ ವಾಲ್ ವಿವಿಧ ಬಗೆಯ ತಿನಿಸುಗಳನ್ನು ಮಾಡುವುದರಲ್ಲಿ ಪರಿಣಿತರಾಗಿದ್ದು, ಮುಂದಿನ ದಿನಗಳಲ್ಲಿ 21 ಕೆ.ಜಿ. ತೂಕದ ಸಮೋಸ ತಯಾರಿಸುವ ಗುರಿ ಹೊಂದಿದ್ದಾರೆ. ಅವರು ತಯಾರಿಸಿರುವ ಫ್ಯಾಮಿಲಿ ಸಮೋಸ ಹೆಚ್ಚು ಜನರನ್ನು ಆಕರ್ಷಿಸಿದೆ.