ಮಾರಕ ಝೀಕಾ ಹಾವಳಿ ಹೆಚ್ಚಾಗುತ್ತಿದ್ದು, ಇದು ಗರ್ಭಿಣಿಯರಿಗೆ ತಗುಲಿದರೆ, ಜನಿಸಲಿರುವ ಮಗು ಅಂಗವೈಕಲ್ಯಕ್ಕೆ ತುತ್ತಾಗುವ ಅಪಾಯವಿದೆ. ಈ ಹಿನ್ನಲೆಯಲ್ಲಿ ಹೆಣ್ಣುಮಕ್ಕಳಿಗೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.
ಝೀಕಾ ವೈರಸ್ ವ್ಯಾಪಿಸಿರುವ ಪ್ರದೇಶಗಳಲ್ಲಿ ಮಹಿಳೆಯರು ಗರ್ಭವತಿಯರಾಗಬಾರದು. ಇದರಿಂದ ತೊಂದರೆಯಾಗಬಹುದಾದ ಸಾಧ್ಯತೆ ಇದೆ. ಮಾರಕ ಝೀಕಾ ವೈರಸ್ ಗಂಭೀರ ಪರಿಣಾಮ ಉಂಟು ಮಾಡಬಹುದಾಗಿದೆ. ಲ್ಯಾಟಿನ್ ಅಮೆರಿಕ, ಕೆರಿಬಿಯನ್ ದೇಶಗಳು ಸೇರಿದಂತೆ ಹಲವು ಕಡೆಗಳಲ್ಲಿ ಮಾರಕ ಝೀಕಾ ವೈರಸ್ ವ್ಯಾಪಕವಾಗಿ ಹರಡಿದ್ದು, ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ರೋಗದ ಲಕ್ಷಣ ಕಂಡು ಬಂದಿರುವ ದೇಶಗಳಲ್ಲಿ ಮಹಿಳೆಯರು ಸದ್ಯಕ್ಕೆ ಗರ್ಭವತಿಯರಾಗುವುದನ್ನು ಮುಂದೂಡಬೇಕೆಂದು ವಿಶ್ವಸಂಸ್ಥೆಯ ವಕ್ತಾರ ನೈಕಾ ಅಲೆಕ್ಸಾಂಡರ್ ತಿಳಿಸಿದ್ದಾರೆ. ಅಲ್ಲದೇ, ಪ್ರಯಾಣದಲ್ಲಿರುವವರು ಲೈಂಗಿಕ ಕ್ರಿಯೆಯಿಂದ ದೂರವಿರಬೇಕೆಂದು ಆರೋಗ್ಯ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.