ಬಳ್ಳಾರಿ: ಕೆಳಗಿನ ಹಂತದ ಮಹಿಳಾ ಅಧಿಕಾರಿಯೊಬ್ಬರಿಗೆ ಸಿ.ಪಿ.ಐ. ಒಬ್ಬರು ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಮಹಿಳಾ ಅಧಿಕಾರಿ ಬಳ್ಳಾರಿ ವಲಯ ಐ.ಜಿ.ಪಿ. ಕಚೇರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಬಳ್ಳಾರಿ ಠಾಣೆಯೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಪೊಲೀಸ್ ಅಧಿಕಾರಿಗೆ ಕಳೆದ 10 ತಿಂಗಳಿಂದ ಲೈಂಗಿಕ ಕಿರುಕುಳ ನೀಡಲಾಗಿದೆ. ಏಕವಚನದಲ್ಲಿ ಅಶ್ಲೀಲ ಪದ ಬಳಸಿ ಕರೆಯುವುದು, ತಮ್ಮ ಚೇಂಬರ್ ಗೆ ಕರೆಸಿಕೊಂಡು ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ತಮ್ಮನ್ನು ಟಾರ್ಗೆಟ್ ಮಾಡಿದ್ದಾರೆ. ಪ್ರಕರಣ ಒಂದರಲ್ಲಿ ಭಾಗಿಯಾದ ಆರೋಪಿ ಕರೆತರಲು ದೆಹಲಿಗೆ ಕಳುಹಿಸಲು ಮುಂದಾಗಿದ್ದು, ಆರೋಪಿಯನ್ನು ಕರೆತರದಿದ್ದರೆ, ಅಮಾನತು ಮಾಡುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.
ಹೀಗೆ ಆರೋಪ ಮಾಡಿ ಸಿ.ಪಿ.ಐ. ವಿರುದ್ಧ ಮಹಿಳಾ ಅಧಿಕಾರಿ ದೂರು ನೀಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿ.ಪಿ.ಐ. ಅವರು, ತಾವು ಯಾವುದೇ ರೀತಿಯಲ್ಲಿ ಲೈಂಗಿಕ ಕಿರುಕುಳ ನೀಡಿಲ್ಲ. ಅವರು ವಿನಾಕಾರಣ ಆರೋಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆನ್ನಲಾಗಿದೆ.