ಕಡಿಮೆ ಬೆಲೆಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ಬಹಳಷ್ಟು ಮಂದಿ ಸೆಕೆಂಡ್ ಹ್ಯಾಂಡ್ ವಸ್ತುಗಳ ಮೊರೆ ಹೋಗುತ್ತಾರೆ. ಇಂತಹ ಬಳಸಿದ ವಸ್ತುಗಳನ್ನು ಮಾರಾಟ ಮಾಡಲೆಂದೇ ವೆಬ್ ಸೈಟ್ ಗಳೂ ಹುಟ್ಟಿಕೊಂಡಿವೆ. ಮಹಿಳೆಯೊಬ್ಬಳು ತನ್ನ ನೆರೆ ಮನೆಯಾಕೆಯಿಂದ ಫ್ರಿಡ್ಜ್ ಖರೀದಿಸಿದ್ದು, ಅದನ್ನು ತೆರೆದು ನೋಡಿದ ವೇಳೆ ಬೆಚ್ಚಿ ಬಿದ್ದಿದ್ದಾಳೆ.
ಹೌದು. ಇಂತದೊಂದು ವಿಲಕ್ಷಣ ಪ್ರಕರಣ ಅಮೆರಿಕಾದ ಉತ್ತರ ಕರೋಲಿನಾದಲ್ಲಿ ನಡೆದಿದೆ. ಅಲ್ಲಿನ ಮಹಿಳೆಯೊಬ್ಬಳು ತನ್ನ ನೆರೆ ಮನೆಯಾಕೆಯಿಂದ 30 ಡಾಲರ್ ಗಳಿಗೆ ಫ್ರಿಡ್ಜ್ ಖರೀದಿಸಿದ್ದಾಳೆ. ತನ್ನ ಮನೆಗೆ ಅದನ್ನು ತಂದಿಟ್ಟಿದ್ದು, ಮಾರನೇ ದಿನ ಬಳಕೆಗೆಂದು ತೆರೆದು ನೋಡಿದಾಗ ಆಕೆಯ ಎದೆಯೇ ಒಡೆದು ಹೋದಂತಾಗಿದೆ.
ಫ್ರಿಜ್ ನಲ್ಲಿ ಮಾನವ ದೇಹದ ಅಂಗಾಂಗಗಳು ಆಕೆಗೆ ಕಂಡು ಬಂದಿವೆ. ಕೂಡಲೇ ಆಕೆ 911 ಕ್ಕೆ ಕರೆ ಮಾಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಅಂಗಾಂಗಗಳನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ತನಗೆ ಫ್ರಿಡ್ಜ್ ಮಾರಾಟ ಮಾಡಿದ್ದವಳ ವೃದ್ದ ತಾಯಿಯ ಶವ ಇದೆಂದು ಗುರುತಿಸಿರುವ ಮಹಿಳೆ, ವೃದ್ದೆ ಹಲವು ತಿಂಗಳಿನಿಂದ ಕಾಣಿಸುತ್ತಿರಲಿಲ್ಲವೆಂದು ಪೊಲೀಸರಿಗೆ ತಿಳಿಸಿದ್ದಾಳೆ. ಫ್ರಿಡ್ಜ್ ಮಾರಾಟ ಮಾಡಿದ್ದಾಕೆ ಈಗ ಊರನ್ನೇ ತೊರೆದಿದ್ದು, ಪೊಲೀಸರು ಆಕೆಯ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.