ಭಾರತದ ಅತಿ ದೊಡ್ಡ ಮೊಬೈಲ್ ನೆಟ್ ವರ್ಕ್ ಸಂಸ್ಥೆಯಾಗಿರುವ ಏರ್ಟೆಲ್, 3 ಜಿ ಸೇವೆ ನಂತರ 4 ಜಿ ಸೇವೆಯನ್ನು ಆರಂಭಿಸಿದೆ. 4 ಜಿ ಪ್ರಚಾರಕ್ಕಾಗಿ ಏರ್ಟೆಲ್ ನೀಡುತ್ತಿರುವ ಜಾಹೀರಾತು ಗಮನ ಸೆಳೆಯುತ್ತಿದೆ. ದುರ್ಗಮ ಪ್ರದೇಶಗಳಲ್ಲೂ ನಮ್ಮ ನೆಟ್ ವರ್ಕ್ ಸಿಗುತ್ತದೆ ಎಂಬುದನ್ನು ಈ ಜಾಹೀರಾತಿನಲ್ಲಿ ಹೇಳಲಾಗಿದೆ.
ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಹುಡುಗಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾಳೆ. ಈಕೆಯ ಕೇಶ ವಿನ್ಯಾಸ, ಧ್ವನಿ ವೀಕ್ಷಕರ ಗಮನ ಸೆಳೆದಿದ್ದು, 4 ಜಿ ಗೆ ಗ್ರಾಹಕರನ್ನು ಸೆಳೆಯಲು ಏರ್ಟೆಲ್ ನೀಡುತ್ತಿರುವ ಈ ಜಾಹೀರಾತು ವೈವಿಧ್ಯಮಯವಾಗಿದೆ. ಈ ಜಾಹೀರಾತಿನಲ್ಲಿ ನಟಿಸಿರುವ ಹುಡುಗಿ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.
4 ಜಿ ಗರ್ಲ್ ಆಗಿರುವ 19 ವರ್ಷದ ಸಾಶಾ ಚೇತ್ರಿ ಮೂಲತಃ ಡೆಹ್ರಾಡೂನ್ ನವರು. ಮುಂಬೈನ ಕ್ಸೇವಿಯರ್ಸ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ನಲ್ಲಿ ಜಾಹೀರಾತು ವಿಷಯದಲ್ಲಿ ಪದವಿ ಪಡೆದಿರುವ ಈಕೆ, ಜಾಹೀರಾತು ಸಂಸ್ಥೆಯೊಂದರಲ್ಲಿ ಕಾಪಿ ರೈಟರ್ ಆಗಿಯೂ ಕೆಲಸ ಮಾಡಿದ್ದಾರೆ. ಏರ್ಟೆಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಳಿಕ ಜಾಹೀರಾತು ಕ್ಷೇತ್ರದಲ್ಲಿ ಆಕೆಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಜೊತೆಗೆ ಬಾಲಿವುಡ್ ಸಹ ಕೈ ಬೀಸಿ ಕರೆಯುತ್ತಿದೆ ಎನ್ನಲಾಗಿದೆ.