ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಬೆಚ್ಚಿ ಬೀಳಿಸುವಂತಿದೆ. ಸೀರೆ ಧರಿಸಿರುವ ಸ್ವಯಂ ಘೋಷಿತ ಬಾಬಾ ಒಬ್ಬ, ನವಜಾತ ಶಿಶುವನ್ನು ಒಂದು ಕೈಯ್ಯಲ್ಲಿ ಹಿಡಿದು ನೃತ್ಯ ಮಾಡುತ್ತಾ ಮನಬಂದಂತೆ ತಿರುಗಿಸಿದ್ದಾನೆ.
ಇನ್ನೂ ಆಶ್ಚರ್ಯಕರ ಸಂಗತಿಯೆಂದೇ ಆತನ ಎದುರಿಗೆ ಕುಳಿತ ಭಕ್ತ ಸಮೂಹ, ಬಾಬಾನ ಈ ಕಾರ್ಯವನ್ನು ಪವಾಡವೆಂಬಂತೆ ನೋಡುತ್ತಿದ್ದಾರೆ. ತನ್ನ ಕೈಯ್ಯಲ್ಲಿರುವ ಮಗುವನ್ನು ಯಾವುದೋ ವಸ್ತುವೇನೋ ಎಂಬಂತೆ ಆತ ತಿರುಗಿಸಿದ್ದು, ಈ ವಿಡಿಯೋ ನೋಡಿದ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರಲ್ಲದೇ ಬಾಬಾನ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.