ಪಾಕಿಸ್ತಾನದ ಕ್ವೆಟ್ಟಾ ಪ್ರಾಂತ್ಯದಲ್ಲಿರುವ ವ್ಯಕ್ತಿಯೊಬ್ಬ ತನ್ನ ಮೂವರು ಪತ್ನಿಯರಿಂದ 35 ಮಕ್ಕಳನ್ನು ಹೊಂದಿದ್ದು, ಮಕ್ಕಳ ಸಂಖ್ಯೆಯನ್ನು ನೂರಕ್ಕೆ ಮುಟ್ಟಿಸುವ ಗುರಿ ಹೊಂದಿದ್ದಾನೆ. ಇದಕ್ಕಾಗಿ ಈಗ ನಾಲ್ಕನೇ ಪತ್ನಿಯ ತಲಾಷೆಯಲ್ಲಿದ್ದಾನೆ.
46 ವರ್ಷದ ಸರ್ದಾರ್ ಜನ್ ಮಹಮ್ಮದ್ ಖಿಲ್ಜಿ ಎಂಬಾತನೇ ಈ ಮಹಾನುಭಾವನಾಗಿದ್ದು, ಹೆಚ್ಚು ಮಕ್ಕಳ ತಂದೆಯಾಗುವುದು ಒಂದು ಧಾರ್ಮಿಕ ಕಾರ್ಯ ಎಂದು ಭಾವಿಸಿದ್ದಾನೆ. ಪಾಕಿಸ್ತಾನದಲ್ಲಿ ಒಬ್ಬ ವ್ಯಕ್ತಿ ನಾಲ್ವರು ಹೆಂಡಿರನ್ನು ಹೊಂದುವ ಅವಕಾಶವಿದ್ದು, ಆದರೆ ಇದಕ್ಕೆ ಆತನ ಮೊದಲ ಪತ್ನಿಯ ಒಪ್ಪಿಗೆ ಇರಬೇಕಾಗುತ್ತದೆ.
ಸರ್ದಾರ್ ಜನ್ ಮಹಮ್ಮದ್ ಖಿಲ್ಜಿಯ ಮೂವರು ಪತ್ನಿಯರೂ ನೂರು ಮಕ್ಕಳನ್ನು ಹೊಂದುವ ಆತನ ಅಭಿಲಾಷೆಗೆ ಪೂರಕವಾಗಿ ಸ್ಪಂದಿಸಿದ್ದಾರಂತೆ. ಹಾಗಾಗಿ ಈಗ ನಾಲ್ಕನೇ ಪತ್ನಿ ಹೊಂದಲು ಆತ ವಧುವಿನ ಹುಡುಕಾಟದಲ್ಲಿದ್ದಾನೆ. ಪಾಕಿಸ್ತಾನದಲ್ಲಿ ಬಹು ಪತ್ನಿತ್ವಕ್ಕೆ ಅವಕಾಶವಿದ್ದರೂ ಬಹುತೇಕರು ಏಕ ಪತ್ನಿಯನ್ನೇ ಹೊಂದಿದ್ದಾರೆ. ಆದರೆ ಸರ್ದಾರ್ ಜನ್ ಮಹಮ್ಮದ್ ಖಿಲ್ಜಿ ಮಾತ್ರ ತನ್ನ ಉದ್ದೇಶ ಈಡೇರಿಸಿಕೊಳ್ಳಲು ಈಗ ಮತ್ತೊಂದು ಮದುವೆಗೆ ಮುಂದಾಗಿದ್ದಾನೆ.