ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಆಟಗಾರರು ಸಾವನ್ನಪ್ಪಿ ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರದಲ್ಲಿ ನಡೆದಿದೆ.
ಕಮಲಾಪುರದ ಹೊಲದಲ್ಲಿ ಗುರುವಾರದಂದು ಯುವಕರು ಕ್ರಿಕೆಟ್ ಆಡುವಾಗ ಸಿಡಿಲು ಬಡಿದಿದ್ದು, ಹತ್ತೊಂಬತ್ತು ವರ್ಷದ ಉಮೇಶ ಹಣಮಂತಪ್ಪ ಜಮಾದಾರ ಹಾಗೂ ಮಹೇಶ್ ಸೂರ್ಯಕಾಂತ ಎಂಬ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಶ್ರೀನಿವಾಸ ರಮೇಶ ನಾಟೀಕಾರ ಎಂಬಾತ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.