ಉತ್ತರ ಪ್ರದೇಶದ ಬರೇಲಿಯಲ್ಲಿ ಅಣ್ಣ-ತಂಗಿ ಮದುವೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ತಂಗಿಯನ್ನು ಓಡಿಸಿಕೊಂಡು ಹೋದ ಸಹೋದರ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಸಂಬಂಧಿಕರ ಕಣ್ಣು ತಪ್ಪಿಸಿ ಹೋಗಿದ್ದ ಸಹೋದರ-ಸಹೋದರಿ ಈಗ ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದು, ತನಿಖೆ ನಡೆಯುತ್ತಿದೆ.
ಬರೇಲಿ ಬಳಿ ಮೊದಲ ಹೆಂಡತಿ ಸಾವನ್ನಪ್ಪಿದ ಕಾರಣ ವ್ಯಕ್ತಿಯೊಬ್ಬ ಇನ್ನೊಬ್ಬಳನ್ನು ಮದುವೆಯಾಗಿದ್ದ. ಮೊದಲ ಹೆಂಡತಿಗೆ ಒಂದು ಗಂಡು ಮಗುವಿತ್ತು. ಎರಡನೇ ಹೆಂಡತಿಗೆ ಕೂಡ ಇದು ಎರಡನೇ ಮದುವೆಯಾಗಿದ್ದು, ಆಕೆಗೂ ಮೊದಲೇ ಒಂದು ಹೆಣ್ಣು ಮಗುವಿತ್ತು. ಎರಡನೇ ಮದುವೆಯಾದ ದಂಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮಗಳು ಮಾವನ ಮನೆಗೆ ಬಂದು ನೆಲೆಸಿದ್ದಳು. ಆದ್ರೆ ಮೊದಲ ಹೆಂಡತಿ ಮಗ ಹಾಗೂ ಎರಡನೇ ಹೆಂಡತಿ ಮಗಳಿಗೆ ಲವ್ ಶುರುವಾಗಿತ್ತು.
ಒಂದು ದಿನ ಮಾವನ ಮನೆಗೆ ಬಂದ ಸಹೋದರ, ತಂಗಿಯನ್ನು ಜೊತೆಗೆ ಕರೆದೊಯ್ದಿದ್ದಾನೆ. ನಂತ್ರ ಯಾರಿಗೂ ತಿಳಿಯದಂತೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಈ ವಿಷಯ ತಿಳಿದ ಹುಡುಗಿ ಕಡೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನವ ಜೋಡಿಯನ್ನು ಹಿಡಿದು ತಂದಿದ್ದಾರೆ. ಹುಡುಗಿಗೆ ಇನ್ನೂ 14 ವರ್ಷವಾಗಿದ್ದು, ಹುಡುಗನ ವಯಸ್ಸು 20. ಹುಡುಗಿ ಅಪ್ರಾಪ್ತೆಯಾಗಿರುವುದರಿಂದ ವೈದ್ಯಕೀಯ ಪರೀಕ್ಷೆ ನಡೆಸಿ, ಕೋರ್ಟ್ ಮುಂದೆ ಹಾಜರುಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ. ಹುಡುಗನನ್ನು ಬಂಧಿಸಲಾಗಿದೆ.