ಜಮ್ಮು: ಕದನ ವಿರಾಮ ಉಲ್ಲಂಘಿಸಿ, ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಪಾಕ್ ಸೈನಿಕರಿಗೆ, ಬಿ.ಎಸ್.ಎಫ್ ಯೋಧರು ತಕ್ಕ ಪಾಠ ಕಲಿಸಿದ್ದಾರೆ.
ಕಳೆದ 1 ವಾರದ ಅವಧಿಯಲ್ಲಿ 15 ಕ್ಕೂ ಹೆಚ್ಚು ಮಂದಿ ಪಾಕ್ ಸೈನಿಕರನ್ನು ಗಡಿ ಭದ್ರತಾ ಪಡೆಯ ಯೋಧರು ಹತ್ಯೆ ಮಾಡಿದ್ದಾರೆ. ಗುಂಡಿನ ದಾಳಿ ಮೂಲಕ, ಭಾರತೀಯ ಸೈನಿಕರ ಗಮನ ಬೇರೆಡೆ ಸೆಳೆದು, ಉಗ್ರರನ್ನು ಗಡಿ ದಾಟಿಸಲು ಮುಂದಾಗಿದ್ದ ಪಾಕ್ ಸೈನಿಕರಿಗೆ ಪ್ರತ್ಯುತ್ತರ ನೀಡಲಾಗಿದೆ. ಕಳೆದ ವಾರದಿಂದ ಈಚೆಗೆ ಸುಮಾರು 15 ಮಂದಿ ಪಾಕ್ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಬಿ.ಎಸ್.ಎಫ್. ಸೀನಿಯರ್ ಆಫೀಸರ್ ಅರುಣ್ ಕುಮಾರ್ ತಿಳಿಸಿದ್ದಾರೆ.
ಗಡಿಯಲ್ಲಿ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸುತ್ತಿದ್ದ ಪಾಕ್ ಸೈನಿಕರಿಗೆ ಮತ್ತು ನುಸುಳಲು ಯತ್ನಿಸಿದ್ದ ಉಗ್ರರಿಗೆ ಗಡಿ ಭದ್ರತಾ ಪಡೆಯ ಯೋಧರು ಪ್ರತ್ಯುತ್ತರ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರಜೋರಿ, ಸಾಂಬಾ, ಅಬ್ದುಲ್ಲಾ, ಸುಚೇತಗಢ, ಆರ್.ಎಸ್. ಪುರ ಮೊದಲಾದ ಪ್ರದೇಶಗಳಲ್ಲಿ ಪಾಕ್ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದಾಗ, ಭಾರತೀಯ ಸೇನೆ ಪ್ರತ್ಯುತ್ತರ ನೀಡಿದ್ದು, ಕಳೆದ ವಾರದಿಂದೀಚೆಗೆ 15 ಮಂದಿ ಪಾಕ್ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾರೆ.