ನವದೆಹಲಿ: ಕಳೆದ ಸಲದಂತೆಯೇ ಪ್ರಧಾನಿ ನರೇಂದ್ರ ಮೋದಿ, ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ.
ಭಾರತ- ಚೀನಾ ಗಡಿಯ ಮನಾದಲ್ಲಿ ಐ.ಟಿ.ಬಿ.ಪಿ. ಯೋಧರೊಂದಿಗೆ ಮೋದಿ ದೀಪಾವಳಿ ಆಚರಿಸಲಿದ್ದು, ನಾಳೆ ಉತ್ತರಾಖಂಡ್ ಗೆ ಭೇಟಿ ನೀಡಲಿದ್ದಾರೆ. ಬದರಿನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ, ಅಲ್ಲಿಂದ ಮನಾಕ್ಕೆ ತೆರಳಲಿದ್ದಾರೆ. ಮನಾದಲ್ಲಿ ಐ.ಟಿ.ಬಿ.ಪಿ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ. ಮೋದಿ ಅವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಕೂಡ ತೆರಳಲಿದ್ದಾರೆ.
2014 ಮತ್ತು 2015 ರಲ್ಲಿ ಮೋದಿ, ಕಾಶ್ಮೀರದಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. ಈ ಬಾರಿ ಇಂಡೋ- ಚೀನಾ ಗಡಿಯಲ್ಲಿ ಐ.ಟಿ.ಬಿ.ಪಿ. ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ.