ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಟೆಸ್ಟ್ ರ್ಯಾಂಕಿಂಗ್ ನ ನೂತನ ಪಟ್ಟಿಯನ್ನು ಪ್ರಕಟಿಸಿದ್ದು, ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿದೆ.
115 ಅಂಕಗಳೊಂದಿಗೆ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 111 ಅಂಕಗಳೊಂದಿಗೆ 2 ನೇ ಸ್ಥಾನದಲ್ಲಿದೆ. 108 ಅಂಕಗಳೊಂದಿಗೆ ಆಸ್ಟ್ರೇಲಿಯಾ 3 ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ 4 ನೇ, ದಕ್ಷಿಣ ಆಫ್ರಿಕಾ 5 ನೇ, ಶ್ರೀಲಂಕಾ 6 ನೇ, ನ್ಯೂಜಿಲೆಂಡ್ 7 ನೇ, ವೆಸ್ಟ್ ಇಂಡೀಸ್ 8 ನೇ, ಬಾಂಗ್ಲಾದೇಶ 9 ನೇ ಹಾಗೂ ಜಿಂಬಾಬ್ವೆ 10 ನೇ ಸ್ಥಾನದಲ್ಲಿವೆ. ಟೆಸ್ಟ್ ಕ್ರಿಕೆಟ್ ನ ಆಲ್ ರೌಂಡರ್ ಪಟ್ಟಿಯಲ್ಲಿ ಆರ್. ಅಶ್ವಿನ್ ಮೊದಲ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ನಲ್ಲಿಯೂ ಅಶ್ವಿನ್ ಮೊದಲ ಸ್ಥಾನವನ್ನುಕಾಯ್ದುಕೊಂಡಿದ್ದಾರೆ. ಸೌತ್ ಆಫ್ರಿಕಾದ ಡೇಲ್ ಸ್ಟೇನ್ 2 ನೇ ಮತ್ತು ಇಂಗ್ಲೆಂಡ್ ನ ಜೇಮ್ಸ್ ಆಂಡರ್ಸನ್ ತೃತೀಯ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ರವೀಂದ್ರ ಜಡೇಜ 7 ನೇ ಸ್ಥಾನದಲ್ಲಿದ್ದಾರೆ.