ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರಗಳಲ್ಲಿ ಬಿಡುವಿಲ್ಲದ ತಾರೆಯಾಗಿ ಅಭಿನಯಿಸಿದ್ದ ನಟಿ ರಂಭಾ ದಾಂಪತ್ಯದಲ್ಲಿ ಬಿರುಕು ಮೂಡಿದೆ.
ಕನ್ನಡ, ತಮಿಳು, ಹಿಂದಿ, ತೆಲುಗು ಸೇರಿದಂತೆ ಹಲವಾರು ಭಾಷೆಗಳಲ್ಲಿ ಅಭಿನಯಿಸಿದ್ದ ರಂಭಾ 2010 ರಲ್ಲಿ ಕೆನಡಾ ಮೂಲದ ಉದ್ಯಮಿ ಇಂದ್ರನ್ ಪದ್ಮನಾಭನ್ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆನಡಾದ ಟೊರಾಂಟೊದಲ್ಲಿ ವಾಸವಾಗಿರುವ ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇತ್ತೀಚೆಗೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಪತಿ, ಪತ್ನಿ ಬೇರೆಯಾಗಿ ವಾಸಿಸತೊಡಗಿದ್ದಾರೆ.
ಪತಿ ಹಿಂತಿರುಗಬಹುದೆಂದು ಭಾವಿಸಿದ್ದ ರಂಭಾ, ಈಗ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಿಂದೂ ವಿವಾಹ ಕಾಯ್ದೆಯಂತೆ ಗಂಡನೊಂದಿಗೆ ವಾಸಿಸಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದು, ಡಿಸೆಂಬರ್ 3 ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ಹೇಳಲಾಗಿದೆ.