ಭಾರತದಲ್ಲಿ ಹೆಚ್ಚಾಗುತ್ತಿರುವ ನಕಲಿ ನೋಟುಗಳ ಹಾವಳಿ ತಡೆಗೆ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಸಾವಿರ ಹಾಗೂ ಐದು ನೂರರ ನೋಟುಗಳನ್ನು ಪರಿಶೀಲಿಸಿ ಪಡೆಯುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಸಮಾಜ ವಿರೋಧಿ ಶಕ್ತಿಗಳು ದೇಶದಲ್ಲಿ ನಕಲಿ ನೋಟುಗಳನ್ನು ಹರಡುತ್ತಿದ್ದಾರೆ. ಹಾಗಾಗಿ ಸಾರ್ವಜನಿಕರು 1000 ಹಾಗೂ 500 ರೂ. ಮುಖ ಬೆಲೆಯ ನೋಟುಗಳನ್ನು ಸರಿಯಾಗಿ ಪರಿಶೀಲಿಸಿ ಪಡೆಯಬೇಕೆಂದು ಬ್ಯಾಂಕ್ ತಿಳಿಸಿದೆ.
ಯಾವುದು ನಕಲಿ, ಯಾವುದು ಅಸಲಿ ನೋಟು ಎಂಬುದನ್ನು ಸಾರ್ವಜನಿಕರು ಪತ್ತೆ ಹಚ್ಚಬೇಕು. ಪ್ರತಿ ಬಾರಿಯೂ ನೋಟನ್ನು ಪರೀಕ್ಷಿಸಿ ಪಡೆಯಬೇಕೆಂದು ಆರ್ ಬಿ ಐ ಹೇಳಿದೆ.
ಇತ್ತೀಚೆಗಷ್ಟೆ ದೆಹಲಿಯಲ್ಲಿ 10 ರೂಪಾಯಿ ನಕಲಿ ನಾಣ್ಯ ತಯಾರಾಗ್ತಿದ್ದ ಕೇಂದ್ರದ ಮೇಲೆ ದಾಳಿ ನಡೆದಿತ್ತು. 10 ರೂಪಾಯಿಯ 800 ನಾಣ್ಯಗಳು ಸಿಕ್ಕಿದ್ದವು. ಈ ಬಗ್ಗೆಯೂ ಆರ್ ಬಿ ಐ ಎಚ್ಚರಿಕೆ ನೀಡಿದೆ.