ಐಸಿಸ್ ಪಾತಕಿಗಳ ರಾಕ್ಷಸಿ ಕೃತ್ಯ ದಿನೇ ದಿನೇ ಹದ್ದು ಮೀರ್ತಾ ಇದೆ. ಸಿರಿಯಾದ ಡೌಮಾ ನಗರದಲ್ಲಿ ಐಸಿಸ್ ಉಗ್ರರು 250 ಕ್ರಿಶ್ಚಿಯನ್ ಮಕ್ಕಳನ್ನು ಯಂತ್ರದಲ್ಲಿ ಹಾಕಿ ಚೂರು ಚೂರು ಮಾಡಿದ್ದಾರೆ. ಪಾಪಿಗಳ ಕೈಗೆ ಸಿಕ್ಕು ಅಪ್ಪಚ್ಚಿಯಾದ ಮಕ್ಕಳೆಲ್ಲ ಸುಮಾರು 4 ವರ್ಷದ ಪುಟಾಣಿಗಳು. ಉಗ್ರರ ಕ್ರೌರ್ಯ ಇಷ್ಟಕ್ಕೇ ಮುಗಿದಿಲ್ಲ.
ಪುರುಷರನ್ನೆಲ್ಲ ಹಿಡಿದು ತಂದು ಬೇಕರಿಯೊಂದರ ಓವನ್ ನಲ್ಲಿ ಹಾಕಿ ಸಜೀವ ದಹನ ಮಾಡಲಾಗಿದೆ. ಉಗ್ರರಿಂದ ತಪ್ಪಿಸಿಕೊಂಡು ಬಂದ ಅಲೈಸ್ ಅಸಫ್ ಎಂಬಾಕೆ ಭಯೋತ್ಪಾದಕರ ನೀಚ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾಳೆ.
ಇನ್ನು ಕೆಲವು ಮಕ್ಕಳನ್ನು ಎತ್ತರದ ಕಟ್ಟಡದ ಬಾಲ್ಕನಿಯಿಂದ ಕೆಳಕ್ಕೆ ಬಿಸಾಡಿ ಹತ್ಯೆ ಮಾಡಲಾಗಿದೆ. 2 ವರ್ಷಗಳ ಹಿಂದೆ ಅಲೈಸ್ ಅಸಫ್ ಮತ್ತವಳ ಮಗನನ್ನು ಐಸಿಸ್ ಉಗ್ರರು ಅಪಹರಿಸಿದ್ರು. ಮಗ ಜಾರ್ಜ್ ನನ್ನು ತಾಯಿಯ ಎದುರಲ್ಲೇ ಬರ್ಬರವಾಗಿ ಕೊಂದು ಹಾಕಿದ್ದಾರೆ. ಅದ್ಹೇಗೋ ಪಾರಾಗಿ ಬಂದಿರುವ ಅಲೈಸ್, ಐಎಸ್ಐಸ್ ಅಮಾಯಕರನ್ನು ಯಾವ ರೀತಿ ಹತ್ಯೆ ಮಾಡುತ್ತಿದೆ ಅನ್ನೋದನ್ನು ವಿವರಿಸಿದ್ದಾರೆ.