ರಾಂಚಿ: ಇಲ್ಲಿನ ಜೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ 4 ನೇ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಜಯ ಗಳಿಸಿದೆ.
ಬ್ಯಾಟಿಂಗ್ ವೈಫಲ್ಯದಿಂದ ಮುಗ್ಗರಿಸಿದ ಟೀಂ ಇಂಡಿಯಾ, ನಿಗದಿತ ಗೆಲುವಿನ ಗುರಿ 261 ರನ್ ಗಳಿಸುವಲ್ಲಿ ವಿಫಲವಾಗಿದೆ. 48.4 ಓವರ್ ಗಳಲ್ಲಿ 241 ರನ್ ಗಳಿಸಿ ಸೋಲು ಕಂಡಿದೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್, ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 260 ರನ್ ಕಲೆ ಹಾಕಿತು. ನ್ಯೂಜಿಲೆಂಡ್ ಪರವಾಗಿ ಮಾರ್ಟಿನ್ ಗುಪ್ಟಿಲ್ 72, ಟಾಮ್ ಲೋಥಮ್ 39, ಕೇನ್ ವಿಲಿಯಮ್ ಸನ್ 41, ರಾಸ್ ಟೇಲರ್ 35, ಜಿಮ್ಮಿ ನಿಶಾಮ್ 6, ಬ್ರಾಡ್ಲಿ ವೇಯ್ಟಿಂಗ್ 14, ಅಂಟಾನ್ ಡಿವಿಸ್ಚ್ 11, ಮಿಚೆಲ್ ಸ್ಯಾಟ್ನರ್ 16, ಟಿಮ್ ಸೋಧಿ 5 ರನ್ ಗಳಿಸಿದ್ದಾರೆ.
ಭಾರತದ ಪರವಾಗಿ, ಉಮೇಶ್ ಯಾದವ್ 1, ಅಮಿತ್ ಮಿಶ್ರಾ 2, ಅಕ್ಷರ್ ಪಟೇಲ್ 1, ಹಾರ್ದಿಕ್ ಪಾಂಡ್ಯ 1, ಧವಳ್ ಕುಲಕರ್ಣಿ 1 ವಿಕೆಟ್ ಪಡೆದರು. 261 ಗೆಲುವಿನ ಗುರಿ ಪಡೆದ ಭಾರತದ ಬ್ಯಾಟ್ಸ್ ಮನ್ ಗಳು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ.
ಅಜಿಂಕ್ಯಾ ರೆಹಾನೆ 57, ರೋಹಿತ್ ಶರ್ಮ 11, ವಿರಾಟ್ ಕೊಹ್ಲಿ 45, ಮಹೇಂದ್ರ ಸಿಂಗ್ ಧೋನಿ 11, ಮನೀಶ್ ಪಾಂಡೆ 12, ಕೇದಾರ್ ಜಾಧವ್ 0, ಹಾರ್ದಿಕ್ ಪಾಂಡ್ಯ 9, ಅಕ್ಷರ್ ಪಟೇಲ್ 38, ಅಮಿತ್ ಮಿಶ್ರಾ 14, ಧವಳ್ ಕುಲಕರ್ಣಿ 25, ಉಮೇಶ್ ಯಾದವ್ 7 ರನ್ ಗಳಿಸಿದ್ದಾರೆ.
ನ್ಯೂಜಿಲೆಂಡ್ ಪರವಾಗಿ ಟಿಮ್ ಸೋಥಿ 3, ಟ್ರೆಂಟ್ ಬೋಲ್ಟ್ 2, ಜಿಮ್ಮಿ ನಿಶಾಂ 2, ಇಶ್ ಸೋಧಿ 1, ಮಿಚೆಲ್ ಸ್ನ್ಯಾಚ್ನರ್ 1 ವಿಕೆಟ್ ಪಡೆದರು. ಅಂತಿಮವಾಗಿ ಭಾರತ ತಂಡ 48.4 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 241 ರನ್ ಗಳಿಸಿ, ಸೋಲು ಕಂಡಿದೆ.