ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಮನೆಗೆ ಡಿಸೆಂಬರ್ ನಲ್ಲಿ ಹೊಸ ಅತಿಥಿಯ ಆಗಮನವಾಗಲಿದೆ. ಕರೀನಾ ಗರ್ಭಿಣಿಯಾದ್ರೂ ಕೆಲಸಕ್ಕೆ ವಿಶ್ರಾಂತಿ ನೀಡಿಲ್ಲ. ಸದ್ಯ ಸಿನಿಮಾದಿಂದ ದೂರವುಳಿದಿದ್ದಾಳೆ. ಆದ್ರೆ ಫ್ಯಾಷನ್ ವೀಕ್, ವಾಕ್, ಜಾಹೀರಾತು ಅಂತಾ ಬ್ಯುಸಿಯಿದ್ದಾಳೆ.
ಗರ್ಭಿಣಿಯಾದ ನಂತ್ರ ಆಕೆಯ ಪ್ರತಿಯೊಂದು ಚಲನೆಯೂ ಸುದ್ದಿಯಾಗ್ತಾ ಇದೆ. ಅಭಿಮಾನಿಗಳು ಕೂಡ ಕರೀನಾ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಹೊಸ ಜೀವನವನ್ನು ಎಂಜಾಯ್ ಮಾಡ್ತಿರುವ ಕರೀನಾ ಹಿಂದೆ, ಸಾಕಷ್ಟು ಜಾಹೀರಾತು ಕಂಪನಿಗಳು ಬಿದ್ದಿವೆ. ಈಗಾಗಲೇ ಕರೀನಾ ತನ್ನ ಮೊದಲ ಪ್ರೆಗ್ನೆಸ್ಸಿ ಜಾಹೀರಾತನ್ನು ಮಾಡಿ ಮುಗಿಸಿದ್ದು, ವಿಡಿಯೋ ಪ್ರಸಾರವಾಗ್ತಿದೆ. Prega News ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಕರೀನಾ, ಪ್ರೆಗ್ನೆನ್ಸಿ ಖುಷಿಯ ಬಗ್ಗೆ ಇದರಲ್ಲಿ ಹೇಳಿದ್ದಾಳೆ.