ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಅವರ ಅದೃಷ್ಟ ಚೆನ್ನಾಗಿತ್ತು. ಯಾಕಂದ್ರೆ ಕಾರು ಅಪಘಾತದಲ್ಲಿ ಜಗನ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಜಗನ್ ಕರ್ನೂಲ್ ನಿಂದ ಹೈದ್ರಾಬಾದ್ ಗೆ ಬರುತ್ತಿದ್ರು. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಪಲಮಕುಲ ಬಳಿ ಬರುತ್ತಿದ್ದಂತೆ ಜಗನ್ ಪ್ರಯಾಣಿಸುತ್ತಿದ್ದ ಕಾರಿನ ಒಂದು ಟೈರ್ ಪಂಕ್ಚರ್ ಆಗಿದೆ.
ಕೂಡಲೇ ಚಾಲಕ ಬ್ರೇಕ್ ಹಾಕಿದ್ರಿಂದ ಕಾರು ಜೋರಾದ ಜರ್ಕ್ ನೊಂದಿಗೆ ರಸ್ತೆ ಬದಿಯಿದ್ದ ಪೊದೆಗೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಪಲ್ಟಿಯಾಗಿಲ್ಲ. ಚಾಲಕನ ಜಾಗರೂಕತೆಯಿಂದಾಗಿ ಭಾರೀ ಅನಾಹುತ ತಪ್ಪಿದೆ.
ಎರಡನೇ ಬಾರಿ ಜಗನ್ ರೆಡ್ಡಿ ಅಪಘಾತದಲ್ಲಿ ಪಾರಾಗಿ ಬಂದಿದ್ದಾರೆ. ಈ ಹಿಂದೆ ಆಂಧ್ರದ ಪ್ರಕಾಶಂ ಜಿಲ್ಲೆಯಲ್ಲಿ ಜಗನ್ ರೆಡ್ಡಿ ಪ್ರಯಾಣಿಸುತ್ತಿದ್ದ ಕಾರು ಅವರದ್ದೇ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿತ್ತು.