ಪವರ್ ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಫೋನ್ ಚಾರ್ಜ್ ಮಾಡುವ ಈ ಪವರ್ ಬ್ಯಾಂಕ್ ಹ್ಯಾಂಡಿಯಾಗಿದೆ. ದುರಾದೃಷ್ಟವಶಾತ್ ಈ ಪವರ್ ಬ್ಯಾಂಕ್ ಕೂಡ ಅಪಾಯಕಾರಿಯಾಗಿದೆ. ಇದು ಜೀವವನ್ನು ಬಲಿ ಪಡೆಯುವಷ್ಟು ಅಪಾಯಕಾರಿಯಾಗಿದೆ. ನೈಜೀರಿಯಾದಲ್ಲೊಬ್ಬಳು ಇದರಿಂದ ಸಾವನ್ನಪ್ಪಿದ್ದಾಳೆ.
ನೈಜೀರಿಯಾದ ನಿವಾಸಿಯೊಬ್ಬಳು ಪವರ್ ಬ್ಯಾಂಕ್ ತನ್ನ ಎದೆಯ ಮೇಲಿಟ್ಟುಕೊಂಡಿದ್ದಳು. ಇನ್ನೊಂದು ಕಡೆ ಪವರ್ ಬ್ಯಾಂಕ್ ಚಾರ್ಜ್ ಆಗ್ತಾ ಇತ್ತು. ಚಾರ್ಜ್ ಆಗ್ತಿದ್ದ ಪವರ್ ಬ್ಯಾಂಕ್ ಬಿಸಿಯಾಗಿದೆ. ಇದರಿಂದ ಯುವತಿಯ ಚರ್ಮ ಸುಟ್ಟಿದೆ. ನಂತ್ರ ವಿದ್ಯುತ್ ತಗುಲಿ ಆಕೆ ಸಾವನ್ನಪ್ಪಿದ್ದಾಳೆ. ಮರುದಿನ ಬೆಳಿಗ್ಗೆ ಪಾಲಕರಿಗೆ ಈ ವಿಷಯ ಗೊತ್ತಾಗಿದೆ.