ನವದೆಹಲಿ: ರಿಲಯನ್ಸ್ ಜಿಯೋ ಬಂದಿದ್ದೇ ಬಂದಿದ್ದು, ಮೊಬೈಲ್ ಸೇವಾ ಕಂಪನಿಗಳ ನಡುವೆ ಭಾರೀ ಪೈಪೋಟಿ ಶುರುವಾಗಿದೆ.
ಜಿಯೋ ಆಫರ್ ಸುರಿಮಳೆ ಶುರುವಾದ ನಂತರ, ಬೇರೆ ಮೊಬೈಲ್ ಕಂಪನಿಗಳು ಕೂಡ ಭರ್ಜರಿ ಆಫರ್ ನೀಡತೊಡಗಿವೆ. ಮಾರುಕಟ್ಟೆಯಲ್ಲಿ ಮೊಬೈಲ್ ಸೇವಾ ಕಂಪನಿಗಳ ಪೈಟೋಟಿಯಿಂದ ಗ್ರಾಹಕರಿಗೆ ಅನುಕೂಲವಾಗಿದೆ. ಪ್ರಮುಖ ಮೊಬೈಲ್ ಸೇವಾ ಕಂಪನಿ ಏರ್ ಟೆಲ್ 259 ರೂಪಾಯಿಗೆ 10 ಜಿ.ಬಿ. ಡೇಟಾ ನೀಡುವುದಾಗಿ ಘೋಷಿಸಿದೆ. ಯಾವುದೇ 4 ಜಿ ಫೋನ್ ಹೊಂದಿರುವ ಗ್ರಾಹಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.
ರೀಚಾರ್ಜ್ ಮಾಡಿದ ಕೂಡಲೇ 1 ಜಿ.ಬಿ ಡೇಟಾ ಬರುತ್ತದೆ. ನಂತರದಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮೈ ಏರ್ ಟೆಲ್ ಆಪ್ ಇನ್ ಸ್ಟಾಲ್ ಮಾಡಿಕೊಂಡು 9 ಜಿ.ಬಿ. ಡೇಟಾ ಪಡೆದುಕೊಳ್ಳಬಹುದಾಗಿದ್ದು, ಈ ಆಫರ್ ಅವಧಿ 1 ತಿಂಗಳು.
ಮೊದಲಿಗೆ ದೇಶದ 3 ರಾಜ್ಯಗಳಲ್ಲಿ ನೀಡಲಾಗಿದ್ದ ಈ ಆಫರ್ ಅನ್ನು ದೇಶಾದ್ಯಂತ ವಿಸ್ತರಿಸಲಾಗಿದೆ.