ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಇಲ್ಲೊಂದು ಸುದ್ದಿಯಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಗಳ ಪೈಕಿ ಒಂದಾದ ಎಸ್.ಬಿ.ಎಂ. ತನ್ನ ಆರು ಲಕ್ಷಕ್ಕೂ ಅಧಿಕ ಎಟಿಎಂ ಡೆಬಿಟ್ ಕಾರ್ಡ್ ಗ್ರಾಹಕರ ಖಾತೆಗಳನ್ನು ಬ್ಲಾಕ್ ಮಾಡಿದೆ.
ಈ ಖಾತೆದಾರರ ಡೆಬಿಟ್ ಕಾರ್ಡ್ ಮಾಹಿತಿ ಸೋರಿಕೆಯಾಗಿರಬಹುದೆಂಬ ಶಂಕೆಯ ಹಿನ್ನಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಗ್ರಾಹಕರಿಗೆ ಉಚಿತವಾಗಿ ಹೊಸ ಎಟಿಎಂ ಕಾರ್ಡ್ ಗಳನ್ನು ವಿತರಿಸಲಾಗುವುದೆಂದು ತಿಳಿದುಬಂದಿದೆ.
ಇತರೆ ಬ್ಯಾಂಕ್ ಡೆಬಿಟ್ ಕಾರ್ಡ್ ಗ್ರಾಹಕರಿಗೂ ಇದೇ ಸಮಸ್ಯೆ ಎದುರಾಗಿದೆ ಎನ್ನಲಾಗಿದ್ದು, ಬ್ಯಾಂಕ್ ಗಳು ಮಾತ್ರ ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವ ಗ್ರಾಹಕರ ಡೆಬಿಟ್ ಕಾರ್ಡ್ ಬ್ಲಾಕ್ ಆಗಿದೆ ಎಂಬ ಸಂಗತಿ ಬಳಕೆ ಸಂದರ್ಭದಲ್ಲಿ ಅರಿವಿಗೆ ಬರಲಿದ್ದು, ಅಂತವರು ಹೆಚ್ಚಿನ ಮಾಹಿತಿಗೆ ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕಿಸಬೇಕಿದೆ.