ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ಅದ್ಭುತ ದೃಶ್ಯಕಾವ್ಯ ‘ಬಾಹುಬಲಿ’. ಈ ಚಿತ್ರದ ಮುಂದುವರೆದ ಭಾಗ ಮುಂದಿನ ವರ್ಷ ರಿಲೀಸ್ ಆಗಲಿದೆ.
ಭಾರೀ ನಿರೀಕ್ಷೆ ಮೂಡಿಸಿರುವ ‘ಬಾಹುಬಲಿ-2’ ಚಿತ್ರದ ಫಸ್ಟ್ ಲುಕ್ ಮುಂಬೈ ಫಿಲಂ ಫೆಸ್ಟಿವೆಲ್ ನಲ್ಲಿ ಬಿಡುಗಡೆಯಾಗಲಿದೆ. ‘ಜಿಯೋ ಮಾಮಿ 18 ನೇ ಮುಂಬೈ ಫಿಲಂ ಫೆಸ್ಟಿವೆಲ್’ನಲ್ಲಿ ‘ಬಾಹುಬಲಿ-2’ ಫಸ್ಟ್ ರಿಲೀಸ್ ಆಗಲಿದ್ದು, ಇದೇ ಸಂದರ್ಭದಲ್ಲಿ ಕಲಾವಿದರು, ತಂತ್ರಜ್ಞರೊಂದಿಗೆ ಸಂವಾದ ಏರ್ಪಡಿಸಲಾಗಿದೆ.
ಫೆಸ್ಟಿವೆಲ್ ನಲ್ಲಿ ನಡೆಯಲಿರುವ ‘ಮಾಮಿ ಮೂವಿ ಮೇಳ’ದಲ್ಲಿ ‘ಬಾಹುಬಲಿ-2’ ಫಸ್ಟ್ ಲುಕ್ ರಿಲೀಸ್ ಮಾಡಲು ಸಂತೋಷವಾಗುತ್ತಿದೆ ಎಂದು ರಾಜಮೌಳಿ ಹೇಳಿದ್ದಾರೆ.
2017 ರ ಏಪ್ರಿಲ್ 28 ರಂದು ‘ಬಾಹುಬಲಿ-2’ ರಿಲೀಸ್ ಆಗಲಿದೆ. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಮೊದಲಾದವರು ಅಭಿನಯಿಸಿದ್ದಾರೆ. ಕಳೆದ ವರ್ಷ ರಿಲೀಸ್ ಆಗಿದ್ದ ‘ಬಾಹುಬಲಿ’ ಗಳಿಕೆಯಲ್ಲಿ ದಾಖಲೆ ಬರೆದಿದ್ದು, ಮೇಕಿಂಗ್ ನಿಂದಲೂ ಗಮನ ಸೆಳೆದಿತ್ತು. 2 ನೇ ಭಾಗ ಭಾರೀ ನಿರೀಕ್ಷೆ ಮೂಡಿಸಿದೆ.