ಭಾರತೀಯ ರೈಲ್ವೇ ಹಲವು ಸುಧಾರಣೆಗಳತ್ತ ಸಾಗಿದೆ. ನಿಗದಿತ ಸಮಯಕ್ಕೆ ರೈಲುಗಳು ನಿಲ್ದಾಣ ತಲುಪುತ್ತಿಲ್ಲವೆಂಬ ಗೊಣಗಾಟ ಈಗ ದೂರವಾಗಿದೆ. ಈ ಮಧ್ಯೆ ಐಷಾರಾಮಿ ‘ಮಹಾರಾಜ ಎಕ್ಸ್ ಪ್ರೆಸ್’ ತನ್ನ ಸೌಲಭ್ಯಗಳ ಕಾರಣಕ್ಕಾಗಿ ಸ್ಪೇನ್ ನ ಪ್ರತಿಷ್ಟಿತ 7 ಸ್ಟಾರ್ ಪುರಸ್ಕಾರಕ್ಕೆ ಪಾತ್ರವಾಗಿದೆ.
ಪ್ರವಾಸಿಗರಿಗಾಗಿ ಸಂಚರಿಸುತ್ತಿರುವ ‘ಮಹಾರಾಜ ಎಕ್ಸ್ ಪ್ರೆಸ್’ ಜನ ಸಾಮಾನ್ಯರ ಪಾಲಿಗೆ ಕೈಗೆಟುಕದಿದ್ದರೂ ಇದರಲ್ಲಿ ಪ್ರಯಾಣಿಸುವ ಸಿರಿವಂತ ಪ್ರಯಾಣಿಕರಿಗೆ ಸಕಲ ಸೌಲಭ್ಯಗಳನ್ನು ನೀಡುವ ಮೂಲಕ ಈ ಪುರಸ್ಕಾರವನ್ನು ತನ್ನದಾಗಿಸಿಕೊಂಡಿದೆ.
7 ರಾತ್ರಿ/8 ಹಗಲು ಹಾಗೂ 3 ರಾತ್ರಿ/4 ಹಗಲು ಪ್ರವಾಸಿ ತಾಣಗಳಾದ ಆಗ್ರಾ, ಜೈಪುರ್, ರನ್ತಾಂಬೋರೆ, ಬಿಕನೀರ್, ಜೋದ್ಪುರ್, ಉದಯ್ಪುರ್, ಬಲಸಿನೋರ್, ಅಜಂತಾ, ಗ್ವಾಲಿಯಾರ್, ಖಜರಾಹೋ, ವಾರಣಾಸಿ, ಹಾಗೂ ಲಕ್ನೋ ನಡುವೆ ಸಂಚರಿಸುತ್ತಿರುವ ಈ ರೈಲು ಪ್ರವಾಸಿಗರ ಗಮನ ಸೆಳೆದಿದೆ. ಹೀಗಾಗಿ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.