ಮುಂಬೈ: ದೇಶದಲ್ಲಿ ಭಯೋತ್ಪಾದಕರ ಕರಿ ನೆರಳು ಆವರಿಸಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಇತ್ತೀಚೆಗಷ್ಟೇ ಅನುಮಾನಾಸ್ಪದ ವ್ಯಕ್ತಿಗಳು ಶಸ್ತ್ರಾಸ್ತ್ರ ಹಿಡಿದು ಮುಂಬೈನಲ್ಲಿ ತಿರುಗಾಡಿದ್ದು ಸುದ್ದಿಯಾಗಿತ್ತು.
ಈಗ ಮತ್ತೊಂದು ಆತಂಕಕಾರಿ ಬೆಳವಣಿಗೆ ನಡೆದಿದೆ. ಮುಂಬೈ ವಿಮಾನ ನಿಲ್ದಾಣ ಸಮೀಪ ಡ್ರೋಣ್ ನೋಡಿದ್ದಾಗಿ ಇಂಡಿಗೋ ಪೈಲಟ್, ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಕುರ್ಲಾ ಸಮೀಪದಿಂದ ವಿಮಾನ ನಿಲ್ದಾಣದವರೆಗೆ ಡ್ರೋಣ್ ಹಾರಿದ್ದನ್ನು ಗಮನಿಸಿದ್ದಾಗಿ ಪೈಲಟ್ ಹೇಳಿದ್ದು, ಈ ಮಾಹಿತಿ ಆಧರಿಸಿ, ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ, ಹೈ ಅಲರ್ಟ್ ಘೋಷಿಸಲಾಗಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋಣ್ ಹಾರಾಟ ನಿಷೇಧಿಸಲಾಗಿದ್ದು, ಹೀಗಿರುವಾಗ ವಿಮಾನ ನಿಲ್ದಾಣದಿಂದ ಸ್ವಲ್ಪವೇ ದೂರದಲ್ಲಿ ಡ್ರೋಣ್ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇಂಡಿಗೋ ಪೈಲಟ್ ನೀಡಿದ ಮಾಹಿತಿ ಆಧಾರದಲ್ಲಿ ತನಿಖೆ ನಡೆಸಲಾಗಿದೆ.