ಗುರ್ ಗಾಂವ್: ಮಹತ್ವದ ಕಾರ್ಯಾಚರಣೆ ನಡೆಸಿರುವ ಹರಿಯಾಣ ಪೊಲೀಸರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 10 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಶಕ್ಕೆ ಪಡೆದ ಐವರು ಯುವತಿಯರಲ್ಲಿ ಮೂವರು ದೆಹಲಿಯವರಾಗಿದ್ದು, ಇಬ್ಬರು ವಿದೇಶಿಯರಾಗಿದ್ದಾರೆ. 5 ಮಂದಿ ಪುರುಷರು, ಇವರನ್ನು ಬಳಸಿಕೊಂಡು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದರು.
ವಾಟ್ಸಾಪ್ ಮೂಲಕ ಗಿರಾಕಿಗಳಿಗೆ ಫೋಟೋ ಕಳುಹಿಸಿ, ರೇಟ್ ಫಿಕ್ಸ್ ಮಾಡುತ್ತಿದ್ದರೆನ್ನಲಾಗಿದೆ. ಗುರ್ ಗಾಂವ್ ಸೆಕ್ಟರ್ 51 ರಲ್ಲಿ ವ್ಯವಸ್ಥಿತವಾಗಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು, ದಾಳಿ ಮಾಡಿದ್ದಾರೆ.
ಬಂಧಿತ ವಿದೇಶಿ ಯುವತಿಯರ ಬಳಿ ಪಾಸ್ ಪೋರ್ಟ್ ಕೂಡಾ ಇರಲಿಲ್ಲ. ಅವರನ್ನು ಇಲ್ಲಿಗೆ ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ತನಿಖೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.