ಸಿಂಗಾಪುರದಲ್ಲಿ ಚಾಲಕ ರಹಿತ ಕಾರು ಪರೀಕ್ಷಾರ್ಥ ಸಂಚಾರದ ವೇಳೆ ಲಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾರೂ ಗಾಯಗೊಂಡಿಲ್ಲ. ಲೇನ್ ಬದಲಾಯಿಸುವ ಸಂದರ್ಭದಲ್ಲಿ ಕಾರು ಅಪಘಾತಕ್ಕೀಡಾಗಿದೆ.
ನ್ಯುಟೊನೊಮಿ, ಚಾಲಕ ರಹಿತ ಕಾರುಗಳ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಪರೀಕ್ಷಾರ್ಥ ಸಂಚಾರ ನಡೆಸುತ್ತಿದೆ. ಪರೀಕ್ಷಾರ್ಥ ಸಂಚಾರದ ವೇಳೆ ಕಾರಿನಲ್ಲಿ ಇಬ್ಬರು ಎಂಜಿನಿಯರ್ ಗಳು ಸಹ ಇದ್ದರು. ವಿಶ್ವದ ಎಲ್ಲ ದೇಶಗಳು ಸ್ವಾಯತ್ತ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಉತ್ತೇಜಿಸುತ್ತಿವೆ.
ಸಿಂಗಾಪುರದಲ್ಲಿ ವರ್ಕ್ ಫೋರ್ಸ್ ಕೂಡ ಕಡಿಮೆ ಇರೋದ್ರಿಂದ ಚಾಲಕ ರಹಿತ ವಾಹನಗಳು ಸಾರ್ವಜನಿಕರಿಗೆ ಉಪಯುಕ್ತವಾಗಲಿವೆ. ಜನರು ಹೆಚ್ಚಾಗಿ ಶೇರಿಂಗ್ ವಾಹನ ಮತ್ತು ಸಾರ್ವಜನಿಕ ಸಾರಿಗೆಯನ್ನು ನೆಚ್ಚಿಕೊಳ್ಳಲಿ ಎಂಬ ಉದ್ದೇಶದಿಂದ ಇವುಗಳನ್ನು ರಸ್ತೆಗಿಳಿಸಲಾಗಿದೆ. ಟೆಕ್ ಸಂಸ್ಥೆಗಳು ಕೂಡ ತಮ್ಮ ಉದ್ಯಮಕ್ಕೆ ಹೊಸ ಹೊಸ ಯೋಜನೆಗಳ ಸೇರ್ಪಡೆಗಾಗಿ ಈ ಚಾಲಕ ರಹಿತ ಕಾರುಗಳ ಯಶಸ್ಸನ್ನೇ ಎದುರು ನೋಡುತ್ತಿವೆ.