ನವದೆಹಲಿ: ಇಷ್ಟು ದಿನ 10 ಅಂಕಿಯನ್ನು ಹೊಂದಿದ್ದ ನಿಮ್ಮ ಮೊಬೈಲ್ ನಂಬರ್ 11 ಕ್ಕೇರಲಿದೆ. 10 ಅಂಕೆಯ ಬದಲಿಗೆ 11 ಡಿಜಿಟ್ ಹೊಂದಿರುವ ನಂಬರ್ ನಿಮ್ಮದಾಗಲಿದೆ.
ದೂರ ಸಂಪರ್ಕ ಇಲಾಖೆ (Department of Telecommunications) ಈ ಕುರಿತು ಚಿಂತನೆ ನಡೆಸಿದ್ದು, ಶೀಘ್ರವೇ ನಿಮ್ಮ ಮೊಬೈಲ್ ನಂಬರ್ 11 ಅಂಕೆಗಳಿಗೆ ಏರಿಕೆಯಾಗಲಿದೆ. ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 11 ಅಂಕಿಗಳ ನಂಬರ್ ಗೆ ಏರಿಕೆ ಮಾಡಲಾಗುವುದು. 2003 ರಲ್ಲಿ 30 ವರ್ಷಗಳ ಅವಧಿಗೆ ಚಾಲ್ತಿಯಲ್ಲಿರುವಂತೆ 10 ಅಂಕಿಗಳ ಸಂಖ್ಯೆಯನ್ನು ಬಳಸಲು ಯೋಜಿಸಲಾಗಿತ್ತು.
ಬದಲಾದ ಪರಿಸ್ಥಿತಿಗನುಗುಣವಾಗಿ, ಮೊಬೈಲ್ ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದ್ದರಿಂದ, 11 ಡಿಜಿಟ್ ಗೆ ಏರಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.