ದೇಹದ ಸ್ವಚ್ಛತೆ ಬಗ್ಗೆ ಗಮನ ಕೊಡದೇ ಇದ್ರೆ ಅಪಾಯ ಗ್ಯಾರಂಟಿ. ಅದರಲ್ಲೂ ಮಕ್ಕಳ ಶುಚಿತ್ವದ ಬಗ್ಗೆ ಅಲಕ್ಷ ವಹಿಸಿದ್ರೆ ಅವರ ಆರೋಗ್ಯದ ಜೊತೆ ಚೆಲ್ಲಾಟವಾಡಿದಂತೆ. ಇದ್ರಿಂದ ಹಲವು ರೋಗಗಳು, ಭಯಾನಕ ತೊಂದರೆಗಳು ವಕ್ಕರಿಸಿಕೊಳ್ಳಬಹುದು.
ಮಧ್ಯಪ್ರದೇಶದಲ್ಲಿ 4 ವರ್ಷದ ಬಾಲಕಿ ರಾಧಿಕಾಗೆ ಕಿವಿಯಲ್ಲಿ ತುರಿಕೆ ಮತ್ತು ನೋವು ಹೆಚ್ಚಾಗಿತ್ತು. ವೈದ್ಯರು ಕೂಲಂಕುಷವಾಗಿ ಪರಿಶೀಲಿಸಿದಾಗ ಬಾಲಕಿಯ ಕಿವಿಯಲ್ಲಿ ನೊಣವೊಂದು ಹಾರಾಡುತ್ತಿರುವುದು ಬೆಳಕಿಗೆ ಬಂತು. ಅಷ್ಟೇ ಅಲ್ಲ ಆ ನೊಣ ಕಿವಿಯೊಳಗೆ 80 ಮೊಟ್ಟೆಗಳನ್ನಿಟ್ಟಿತ್ತು, ಅವು ಕೂಡ ಹುಳಗಳಾಗಿ ಬದಲಾಗಿದ್ದವು.
ಇನ್ನು ಸ್ವಲ್ಪ ತಡವಾದ್ರೂ ಅವು ಬಾಲಕಿಯ ಮೆದುಳನ್ನೇ ತಿನ್ನಲು ಆರಂಭಿಸುತ್ತಿದ್ದವು. ಸುಮಾರು ಒಂದು ವಾರದಿಂದ ನೊಣ ಮತ್ತು 80 ಹುಳಗಳು ಬಾಲಕಿಯ ಕಿವಿಯೊಳಗಿದ್ದವು. 90 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರು ಹುಳಗಳು ಮತ್ತು ನೊಣವನ್ನು ಹೊರತೆಗೆದಿದ್ದಾರೆ. ಆದ್ರೆ ಆಕೆಯ ಒಂದು ಬದಿಯ ಚರ್ಮ ಮತ್ತು ಎಲುಬಿಗೆ ಅವು ಹಾನಿ ಮಾಡಿವೆ. ಅದೃಷ್ಟವಶಾತ್ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆತಿದ್ದರಿಂದ ಬಾಲಕಿ ಬದುಕುಳಿದಿದ್ದಾಳೆ.