ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಕಾಮುಕನೊಬ್ಬ ಪೈಶಾಚಿಕ ಕೃತ್ಯ ಎಸಗಿದ್ದಾನೆ. ತನ್ನ 3 ವರ್ಷದ ಮಗಳು, 9 ವರ್ಷದ ಮಲಮಗಳು, ಸಾಕಿದ ನಾಯಿ ಮತ್ತು ಕೋಳಿಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ. ಗಾಢ ನಿದ್ದೆಯಲ್ಲಿದ್ದಾಗಲೆಲ್ಲ ಮಲಮಗಳ ಮೇಲೆರಗಿದ್ದ ಈ ನೀಚ ತನ್ನ ಸ್ವಂತ ಮಗಳು 3 ವರ್ಷದ ಕಂದಮ್ಮನನ್ನೂ ಬಿಟ್ಟಿರಲಿಲ್ಲ.
ನಾಯಿ ಮತ್ತು ಕೋಳಿಗಳ ಜೊತೆ ಭೇದಕ ಲೈಂಗಿಕ ಕ್ರಿಯೆ ನಡೆಸಿದ್ದ. ಪ್ರಾಣಿಗಳು ಮತ್ತು ಮಕ್ಕಳ ಬಗ್ಗೆ ಅವನಿಗಿದ್ದ ಕೆಟ್ಟ ಭಾವನೆ ಮತ್ತು ದುರ್ನಡತೆಯೇ ಇದಕ್ಕೆ ಕಾರಣ ಅಂತಾ ಮನೋವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ತನ್ನ ಮಾಜಿ ಪತ್ನಿಗೆ ಬರೆದಿರುವ ಪತ್ರದಲ್ಲಿ ತಾನು ಮಾಡಿದ ಹೇಯ ಕೃತ್ಯಗಳ ಬಗ್ಗೆ ಆತ ತಪ್ಪೊಪ್ಪಿಕೊಂಡಿದ್ದ.
ಕೂಡಲೇ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಕಳೆದ ಬುಧವಾರ ಅಪರಾಧಿಗೆ 6 ವರ್ಷ 7 ತಿಂಗಳು ಸೆರೆವಾಸ ವಿಧಿಸಲಾಗಿತ್ತು. ಆದ್ರೆ ಆತ ಸಂಪೂರ್ಣವಾಗಿ ತಪ್ಪೊಪ್ಪಿಕೊಂಡಿದ್ದರಿಂದ ಶಿಕ್ಷೆಯನ್ನು ಪೆರೋಲ್ ರಹಿತವಾಗಿ ಮೂರೂವರೆ ವರ್ಷಕ್ಕೆ ಇಳಿಸಲಾಗಿದೆ. ಆದ್ರೆ ಆತ ತನ್ನ ಕುಟುಂಬದ ಯಾವುದೇ ಸದಸ್ಯರನ್ನು ಭೇಟಿಯಾಗುವಂತಿಲ್ಲ. ಆತನ ಕಾಮುಕತೆಯನ್ನು ನಿಗ್ರಹಿಸಲು ಕೂಡ ಜೈಲಿನಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಆತನ ಕೃತ್ಯ ಕೇಳಿದವರು ಮರಣದಂಡನೆಯೇ ಸೂಕ್ತ ಎಂದು ಹೇಳುತ್ತಿದ್ದಾರೆ.