ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಪತ್ನಿ ಸಾಕ್ಷಿ ಧೋನಿ ಮತ್ತಿತರರ ವಿರುದ್ದ ಕೋಟ್ಯಾಂತರ ರೂ. ವಂಚಿಸಿರುವ ಆರೋಪ ಹೊರೆಸಿ ದೂರು ದಾಖಲಿಸಲಾಗಿದೆ.
ಸಾಕ್ಷಿ ಧೋನಿ, ಅರುಣ್ ಪಾಂಡೆ, ಶುಭವತಿ ಪಾಂಡೆ ಹಾಗೂ ಪ್ರತಿಮಾ ಪಾಂಡೆಯವರು ನಿರ್ದೇಶಕರಾಗಿದ್ದ Rhiti MSD Almode Pvt. Ltd ಕಂಪನಿಯ ಶೇರುಗಳನ್ನು ಪಡೆದುಕೊಂಡಿದ್ದ ಡೆನಿಸ್ ಆರೋರಾ ಎಂಬವರು ಈ ದೂರು ದಾಖಲಿಸಿದ್ದು, ಕಂಪನಿಯಲ್ಲಿ ಶೇರು ಹೊಂದಿದ್ದ ತಾವು, ಇದನ್ನು ಕಂಪನಿಯ ನಿರ್ದೇಶಕರಿಗೆ ವರ್ಗಾಯಿಸಿದ ವೇಳೆ ಮಾರ್ಚ್ 31 ರೊಳಗೆ 11 ಕೋಟಿ ರೂ. ನೀಡುವುದಾಗಿ ತಿಳಿಸಲಾಗಿತ್ತು ಎಂದಿದ್ದಾರೆ.
ಆದರೆ ಇದುವರೆಗೂ ತಮಗೆ ಕೇವಲ 2.25 ಕೋಟಿ ರೂ. ಮಾತ್ರ ನೀಡಿರುವುದಾಗಿ ಡೆನಿಸ್ ಆರೋರಾ ಆರೋಪಿಸಿದ್ದು, ಈ ಕುರಿತು ವಿಚಾರಿಸಲು ಹೋದರೆ ನಿರ್ದೇಶಕರ್ಯಾರು ಕೈಗೆ ಸಿಗುತ್ತಿಲ್ಲವೆಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದು, ಈ ಮಧ್ಯೆ ಸಾಕ್ಷಿ ಧೋನಿ ಕಳೆದ ವರ್ಷವೇ ತಮ್ಮ ನಿರ್ದೇಶಕ ಸ್ಥಾನ ತ್ಯಜಿಸಿರುವುದಾಗಿ ಕಂಪನಿ ಮೂಲಗಳು ತಿಳಿಸಿವೆ.