ರಾಯಚೂರು: ವೇಶ್ಯಾವಾಟಿಕೆ ಅಡ್ಡೆಯೊಂದರ ಮೇಲೆ ದಾಳಿ ನಡೆಸಿರುವ ರಾಯಚೂರು ಪೊಲೀಸರು, ಮೂವರನ್ನು ಬಂಧಿಸಿದ್ದಾರೆ.
ದಾಳಿಯಲ್ಲಿ ಹಲವು ಯುವತಿಯರನ್ನು ರಕ್ಷಿಸಲಾಗಿದೆ. ರಾಯಚೂರಿನ ಸ್ಟೇಷನ್ ರಸ್ತೆಯ ಬಡಾವಣೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪಶ್ಚಿಮ ಠಾಣೆ ಪೊಲೀಸರು, ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಮೂವರನ್ನು ಬಂಧಿಸಿದ್ದು, ಚೆನ್ನೈ ಹಾಗೂ ಬಳ್ಳಾರಿಯ ಯುವತಿಯರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಕೆಲಸ ಕೊಡಿಸುವುದಾಗಿ ಹೊರಗಿನಿಂದ ಯುವತಿಯರನ್ನು ಕರೆತಂದು, ರಾಯಚೂರಿನ ಪ್ರತಿಷ್ಠಿತ ಪ್ರದೇಶದಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು.