ಬೆಳಗಾವಿ: ಬೆಳಗಾವಿ ಮಾರ್ಕೇಟ್ ಠಾಣೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮಹತ್ವದ ಕಾರ್ಯಾಚರಣೆ ನಡೆಸಿ, ನೂರಾರು ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
500 ಕ್ಕೂ ಅಧಿಕ ಆನೆ ದಂತ, ಜಿಂಕೆ ಹಾಗೂ ಸಾರಂಗದ ಕೊಂಬುಗಳು ಚಿಪ್ಪು ಹಂದಿಯ ಚಿಪ್ಪುಗಳು ಸೇರಿದಂತೆ ವಿವಿಧ ವನ್ಯ ಜೀವಿಗಳ ದೇಹದ ಭಾಗಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಳಗಾವಿ ಶೆಟ್ಟಿಗಲ್ಲಿಯ ಸಲೀಂ ಚಮಡೆವಾಲೆ ಎಂಬುವನ ಮನೆಯಲ್ಲಿ ಆನೆ ದಂತ, ಜಿಂಕೆ ಕೊಂಬು ಅಕ್ರಮವಾಗಿ ಸಂಗ್ರಹಿಸಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದ್ದಾರೆ.
ಇವುಗಳನ್ನು ಗೋವಾ ಮೂಲಕ ವಿಯೆಟ್ನಾಂ, ಚೀನಾ ಮೊದಲಾದ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿತ್ತು. ಔಷಧ ಮತ್ತಿತರ ಬಳಕೆಗೆ ಸಾಗಾಣೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.