ಭಾರತ ಕ್ರಿಕೆಟ್ ತಂಡದ, ಸೀಮಿತ ಓವರ್ ಗಳ ಪಂದ್ಯದ ನಾಯಕ, ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರಿತ ಚಿತ್ರ ‘ಎಂ.ಎಸ್. ಧೋನಿ- ದಿ ಅನ್ ಟೋಲ್ಡ್ ಸ್ಟೋರಿ’ ಗಳಿಕೆಯಲ್ಲಿ ದಾಖಲೆ ಬರೆದಿದೆ.
ಧೋನಿ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಕಮಾಲ್ ಮಾಡಿದ್ದು, ಧೋನಿ ರೀತಿಯಲ್ಲೇ ಸೆಂಚುರಿ ಬಾರಿಸಿದ್ದಾರೆ. ಬಿಡುಗಡೆಯಾದ 10 ದಿನಗಳಲ್ಲಿ ‘ಎಂ.ಎಸ್. ಧೋನಿ- ದಿ ಅನ್ ಟೋಲ್ಡ್ ಸ್ಟೋರಿ’ 109 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿದೆ. ಕಳೆದ ಸೆಪ್ಟಂಬರ್ 30 ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಎಲ್ಲಾ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಸುಶಾಂತ್ ಸಿಂಗ್ ರಜಪೂತ್, ಭೂಮಿಕಾ, ದಿಶಾ, ಅನುಪಮ್ ಖೇರ್ ಮೊದಲಾದವರು ಅಭಿನಯಿಸಿರುವ ಚಿತ್ರವನ್ನು ನೀರಜ್ ಪಾಂಡೆ ನಿರ್ದೇಶಿಸಿದ್ದಾರೆ. ‘ಧೋನಿ’ ಚಿತ್ರ 10 ದಿನದಲ್ಲಿ 109 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ.