ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್’ ಸೀಸನ್ 4 ಅಕ್ಟೋಬರ್ 9 ರಿಂದ ಆರಂಭವಾಗಿದೆ.
ಮೊದಲ ವಾರದ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆಯಿತು. ಇದಕ್ಕಾಗಿ ಟಾಸ್ಕ್ ನೀಡಲಾಗಿತ್ತು. ರೂಬಿಕ್ ಕ್ಯೂಬ್ ಚೌಕ ಜೋಡಿಸುವ ಪ್ರಕ್ರಿಯೆಯಲ್ಲಿ ಮೊದಲಿಗರಾಗಿ ಬಂದ ಕೀರ್ತಿ ಕುಮಾರ್ ಅಲಿಯಾಸ್ ಕಿರಿಕ್ ಕೀರ್ತಿ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಇದರೊಂದಿಗೆ ನಾಯಕನನ್ನು ಹೊರತುಪಡಿಸಿ, ಉಳಿದ 14 ಮಂದಿಯಲ್ಲಿ ಐವರನ್ನು ಮೊದಲ ವಾರದ ನಾಮಿನೇಷನ್ ಗೆ ಆಯ್ಕೆ ಮಾಡಲಾಗಿದೆ.
14 ಸ್ಪರ್ಧಿಗಳು ತಮ್ಮ ಆಯ್ಕೆಯ 5 ಹೆಸರುಗಳನ್ನು ಸೂಚಿಸಿದ್ದಾರೆ. ಅವರಲ್ಲಿ ಪ್ರಥಮ್, ವಾಣಿಶ್ರೀ, ಸಂಜನಾ, ದೊಡ್ಡ ಗಣೇಶ್, ಭುವನ್ ಅವರು ನಾಮಿನೇಟ್ ಆಗಿದ್ದಾರೆ.
ನಾಮಿನೇಟ್ ಆದ ಐವರಲ್ಲಿ ಒಬ್ಬರನ್ನು ಮನೆಯಲ್ಲಿಯೇ ಉಳಿಸಿಕೊಳ್ಳುವ ಅವಕಾಶವನ್ನು ಕ್ಯಾಪ್ಟನ್ ಕೀರ್ತಿ ಅವರಿಗೆ ನೀಡಲಾಗಿದ್ದು, ಅವರು ದೊಡ್ಡ ಗಣೇಶ್ ಅವರನ್ನು ಉಳಿಸಿಕೊಂಡಿದ್ದಾರೆ. ನಾಲ್ವರು ನಾಮಿನೇಟ್ ಆಗಿದ್ದಾರೆ.