ಏಳು ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಅಂಬುಲೆನ್ಸ್, ಎಂಜಿನ್ ವೈಫಲ್ಯದ ಕಾರಣಕ್ಕಾಗಿ ಮೈದಾನದಲ್ಲಿ ತುರ್ತಾಗಿ ಇಳಿದಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
Alchemist Airlines ಗೆ ಸೇರಿದ ಈ ಏರ್ ಅಂಬುಲೆನ್ಸ್ ಪಾಟ್ನಾದಿಂದ ದೆಹಲಿಗೆ ಬರುತ್ತಿದ್ದ ವೇಳೆ ಮಂಗಳವಾರ ಮಧ್ಯಾಹ್ನ 2-45 ರ ಸುಮಾರಿಗೆ ಎಂಜಿನ್ ನಲ್ಲಿ ಸಮಸ್ಯೆ ತಲೆದೋರಿದ ಕಾರಣ ನಜಫ್ ಗರ್ ಏರಿಯಾದಲ್ಲಿ ತುರ್ತಾಗಿ ಇಳಿದಿದ್ದು, ಐದು ಮಂದಿ ಗಾಯಗೊಂಡಿದ್ದಾರೆಂದು ಹೇಳಲಾಗಿದೆ.
ಮಾಹಿತಿ ದೊರೆಯುತ್ತಿದ್ದಂತೆಯೇ ಫೈರ್ ಎಂಜಿನ್ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.