ಉರಿ ಬಿಸಿಲಿನಿಂದ ಪಾರಾಗಲು ತಲೆಗೆ ಟೋಪಿಯನ್ನು ಧರಿಸುವುದು ಮಾಮೂಲು. ಆದರೆ ಬಿಸಿಲಿನಿಂದ ರಕ್ಷಣೆಯನ್ನು ಪಡೆಯುವುದರ ಹೊರತಾಗಿ ಇದು ಫ್ಯಾಷನಬಲ್ ಲುಕ್ ನೀಡುತ್ತದೆ.
ಆದರೆ ಟೋಪಿಯನ್ನು ಆಯ್ಕೆ ಮಾಡುವಾಗ ಕೆಲವು ವಿಷಯಗಳ ಕಡೆ ಗಮನ ಹರಿಸಬೇಕಾಗುತ್ತದೆ. ಹೆಚ್ಚು ಭಾರವಿರದ, ಹಗುರಾದ, ತಿಳಿ ಬಣ್ಣದ ಟೋಪಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಗಾಢ ಬಣ್ಣಗಳು ಸೂರ್ಯನ ಶಾಖವನ್ನು ಹೀರಿಕೊಂಡು ಕಿರಿಕಿರಿ ಮಾಡಬಹುದು.
ಬರೀ ಕಾಟನ್ ಟೋಪಿಗಳಲ್ಲದೆ ಹುಲ್ಲು, ನಾರುಗಳಿಂದ ತಯಾರಾಗುವ ಟೋಪಿಗಳು ಲಭ್ಯವಿರುವುದರಿಂದ ಅವು ಧರಿಸುವವರ ತಲೆಯನ್ನು ಸದಾ ತಂಪಾಗಿರಿಸುತ್ತವೆ ಮತ್ತು ಧರಿಸಲು ಆರಾಮದಾಯಕ.
ವಿವಿಧ ವಿನ್ಯಾಸ, ವೈವಿಧ್ಯಮಯ ಬಣ್ಣ, ಮಣಿ, ಲೇಸ್, ಹೂ ಗಳಿಂದ ಅಲಂಕೃತವಾದ ಟೋಪಿಗಳು ಮಕ್ಕಳಿಗೆ ಇಷ್ಟವಾಗುತ್ತವೆ. ತಮ್ಮ ಮುಖ ಮತ್ತು ತಲೆಯ ಆಕೃತಿಗೆ ಸೂಕ್ತವಾಗಿ ಹೊಂದಿಕೊಳ್ಳುವ ಟೋಪಿಗಳನ್ನು ಆಯ್ಕೆ ಮಾಡಿಕೊಂಡು ಧರಿಸುವುದರಿಂದ ಬಿಸಿಲಿನಿಂದ ತಲೆ, ಕಣ್ಣನ್ನು ಸ್ವಲ್ಪ ಮಟ್ಟಿಗೆ ರಕ್ಷಿಸಿಕೊಳ್ಳಬಹುದು ಹಾಗೆಯೇ ಜಿಟಿ ಜಿಟಿ ಮಳೆಯಿಂದಲೂ ತಲೆಯನ್ನು ರಕ್ಷಿಸುತ್ತದೆ.