ಗೆಳತಿ ತನ್ನ ಪ್ರೀತಿಯನ್ನು ತಿರಸ್ಕರಿಸಿದಳೆಂಬ ಕಾರಣಕ್ಕೆ ನೊಂದ ಪ್ರೇಮಿಯೊಬ್ಬ ನಡು ರಸ್ತೆಯಲ್ಲೇ ಆಕೆಯ ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡ ಘಟನೆ ಚೀನಾದಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವಕ ತನ್ನ ಕಾಲು ಹಿಡಿದ ವೇಳೆ ಆತನಿಗೆ ಬೈಯ್ಯುತ್ತಲೇ ಬಿಡಿಸಿಕೊಂಡು ಹೋಗಲು ಯುವತಿ ಯತ್ನಿಸಿದರೂ ಆತ ಮಾತ್ರ ಹಿಡಿದ ಕಾಲನ್ನು ಬಿಟ್ಟಿಲ್ಲ. ಇದರಿಂದ ಯುವತಿಯ ಶೂ ಕಳಚಿ ಬಂದಿದ್ದು, ಆದರೂ ಯುವಕ ಪ್ರೇಮ ಭಿಕ್ಷೆ ಯಾಚಿಸಿದ್ದಾನೆ.
ಈ ಎಲ್ಲವನ್ನು ನೋಡುತ್ತಿದ್ದವರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಅದೀಗ ವೈರಲ್ ಆಗಿದೆ. ಕೆಲವರು ಯುವಕn ವರ್ತನೆಗೆ ಟೀಕೆ ಮಾಡಿದ್ದರೆ ಮತ್ತೇ ಕೆಲವರು ಮರುಕ ವ್ಯಕ್ತಪಡಿಸಿದ್ದಾರೆ. ಯುವಕನ ಮನವಿಗೆ ಯುವತಿ ಓಗೊಟ್ಟಳಾ ಎಂಬುದು ಮಾತ್ರ ತಿಳಿದುಬಂದಿಲ್ಲ.