ಮಧ್ಯಪ್ರದೇಶದ ಇಂದೋರ್ ನ ಗೀತಾನಗರದಲ್ಲಿ ಫೇಸ್ಬುಕ್ ಸ್ನೇಹವೊಂದು ಕೊಲೆಯಲ್ಲಿ ಅಂತ್ಯಕಂಡಿದೆ. ಹುಡುಗಿ ಹೆಸರಿನಲ್ಲಿ ಹುಡುಗನೊಬ್ಬ ಹುಡುಗಿಯ ಸ್ನೇಹ ಬೆಳೆಸಿದ್ದಾನೆ. ಇದು ಗೊತ್ತಾದ ಹುಡುಗಿ ಆತನ ಅಕೌಂಟ್ ಬ್ಲಾಕ್ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಯುವಕ, ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಚಾಕುವಿನಿಂದ ಹಲ್ಲೆಗೈದು ಕೊಲೆ ಮಾಡಿದ್ದಾನೆ.
ಆರೋಪಿ 24 ವರ್ಷದ ಅಮಿತ್, ಪ್ರಿಯಾಂಸಿ ಸಿಂಗ್ ಹೆಸರಿನಲ್ಲಿ ಫೇಸ್ಬುಕ್ ಅಕೌಂಟ್ ಓಪನ್ ಮಾಡಿದ್ದಾನೆ. ಇದೇ ಹೆಸರಿನಲ್ಲಿ ಪ್ರಿಯಾ ಸ್ನೇಹ ಗಳಿಸಿದ್ದಾನೆ. ನಾಲ್ಕು ದಿನಗಳ ನಂತ್ರ ಪ್ರಿಯಾಗೆ ಅಮಿತ್ ಸತ್ಯ ಹೇಳಿದ್ದಾನೆ. ನಂತ್ರ ಪ್ರಿಯಾ ಅಮಿತ್ ಫೇಸ್ಬುಕ್ ಅಕೌಂಟ್ ಬ್ಲಾಕ್ ಮಾಡಿದ್ದಾಳೆ.
ಮಾತನಾಡುವುದಾಗಿ ಮನೆಗೆ ಬಂದ ಅಮಿತ್, ಪ್ರಿಯಾ ರೂಮಿನೊಳಗೆ ಹೋಗಿದ್ದಾನೆ. ಅಲ್ಲಿ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ರಕ್ಷಣೆಗಾಗಿ ಪ್ರಿಯಾ ಬಾತ್ ರೂಂ ಗೆ ಓಡಿದ್ದಾಳೆ. ತಡೆಯಲು ಬಂದ ಪ್ರಿಯಾ ತಾಯಿ ಮೇಲೆಯೂ ಹಲ್ಲೆ ನಡೆಸಿದ್ದಾನೆ. ತಾಯಿ ಕಿರಣ್ ಕಿರುಚಿಕೊಂಡಾಗ ತಪ್ಪಿಸಿಕೊಳ್ಳಲು ಯತ್ನಿಸಿ ಮಹಡಿಯಿಂದ ಬಿದ್ದು ಕಾಲು ಮುರಿದುಕೊಂಡಿದ್ದಾನೆ ಅಮಿತ್.
ಬಾತ್ ರೂಂ ಬಾಗಿಲು ಹಾಕಿಕೊಂಡಿದ್ದ ಪ್ರಿಯಾಗೆ ಅತಿಯಾಗಿ ರಕ್ತಸ್ರಾವವಾಗಿದ್ದು, ಆಕೆ ಸಾವನ್ನಪ್ಪಿದ್ದಾಳೆ. ಆರೋಪಿ ಅಮಿತ್ ಗೆ ಚಿಕಿತ್ಸೆ ನೀಡಲಾಗ್ತಾ ಇದೆ. ಪ್ರಿಯಾ ಹಾಗೂ ನಾನು ಪ್ರೀತಿ ಮಾಡ್ತಾ ಇದ್ವಿ ಎಂದಿರುವ ಅಮಿತ್ ಕ್ಷಣಕ್ಕೊಂದು ಕಥೆ ಹೇಳ್ತಿದ್ದಾನೆ.