ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್, ಕಬೀರ್ ಖಾನ್ ನಿರ್ದೇಶನದ ‘ಟ್ಯೂಬ್ ಲೈಟ್’ ಚಿತ್ರದ ಚಿತ್ರೀಕರಣಕ್ಕಾಗಿ ಸದ್ಯ ಮನಾಲಿಯಲ್ಲಿದ್ದಾರೆ. ಈ ಹಿಂದೆ ಲಡಾಕ್ ನಲ್ಲಿ ಚಿತ್ರೀಕರಣ ನಡೆದಿದ್ದು, ಈಗ ಚಿತ್ರ ತಂಡ ಮನಾಲಿಗೆ ಶಿಫ್ಟ್ ಆಗಿದೆ.
‘ಟ್ಯೂಬ್ ಲೈಟ್’ ಚಿತ್ರೀಕರಣ ಭರದಿಂದ ಸಾಗಿದ್ದು, ಈ ಕಾರಣಕ್ಕಾಗಿಯೇ ಸಲ್ಮಾನ್ ಖಾನ್ ಈ ಬಾರಿಯ ಗಣೇಶ ಚತುರ್ಥಿಯನ್ನು ಕುಟುಂಬ ಸದಸ್ಯರೊಂದಿಗೆ ಆಚರಿಸುವ ಅವಕಾಶದಿಂದ ವಂಚಿತರಾಗಿದ್ದರು.
ಮನಾಲಿಯಲ್ಲಿರುವ ಸಲ್ಮಾನ್ ಖಾನ್ ಚಿತ್ರೀಕರಣದ ಬಿಡುವಿನ ಅವಧಿಯಲ್ಲಿ ರಾಯಲ್ ಎನ್ ಫೀಲ್ಡ್ ಮೋಟಾರ್ ಬೈಕ್ ನಲ್ಲಿ ರೌಂಡ್ ಹಾಕಿದ್ದಾರೆ. ಸಲ್ಮಾನ್ ಖಾನ್ ರ ಜಾಲಿ ರೈಡ್ ನ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಟ್ಯೂಬ್ ಲೈಟ್’ ಚಿತ್ರವನ್ನು 2017 ರ ಈದ್ ಸಂದರ್ಭದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ.