ಶಾಪಿಂಗ್ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು, ಹೇಳದೆ, ಕೇಳದೇ ಜ್ಯೂಸ್ ಕುಡಿದಿದ್ದಲ್ಲದೇ, ಮಳಿಗೆಯಿಂದ ಪರಿಹಾರವನ್ನು ಕೂಡ ಪಡೆದುಕೊಂಡ ಸ್ವಾರಸ್ಯಕರ ಪ್ರಕರಣ ಅಮೆರಿಕದಲ್ಲಿ ನಡೆದಿದೆ.
ಅಮೆರಿಕದ ಟೆನ್ನೀಸ್ಸಿಯ ಮೇರಿವಿಲ್ಲೆಯ ಡಾಲರ್ಸ್ ಜನರಲ್ ಶಾಪಿಂಗ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಡಯಾಬಿಟಿಕ್ ರೋಗಿಯಾಗಿದ್ದು, ಕೆಲಸ ಮಾಡುವ ಸಂದರ್ಭದಲ್ಲಿ ಸುಸ್ತಾಗಿ ಅಲ್ಲೇ ಇದ್ದ 1.69 ಡಾಲರ್ ಮೌಲ್ಯದ ಜ್ಯೂಸ್ ಅನ್ನು ಹೇಳದೇ, ಕೇಳದೇ ಕುಡಿದಿದ್ದಾಳೆ. ಇದಕ್ಕೆ ಆಕ್ಷೇಪಿಸಿದ ಡಾಲರ್ ಜನರಲ್ ಸ್ಟೋರ್ ವ್ಯವಸ್ಥಾಪಕರು ಆಕೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.
ಅಂದ ಹಾಗೆ ಈ ಘಟನೆ ನಡೆದಿದ್ದು 2014 ರಲ್ಲಿ. ಕೆಲಸದಿಂದ ತೆಗೆದು ಹಾಕಿದ್ದ ಸಂಸ್ಥೆಯ ವಿರುದ್ಧ ಮಹಿಳೆ ಅಮೆರಿಕದ ಕಾರ್ಮಿಕ ಆಯೋಗಕ್ಕೆ ದೂರು ನೀಡಿದ್ದಾಳೆ. ಅಲ್ಲಿ ಸುದೀರ್ಘ ವಿಚಾರಣೆ ನಡೆದಿದ್ದು, ಡಯಾಬಿಟಿಕ್ ರೋಗಿಯಾಗಿದ್ದ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿದ್ದರಿಂದ ಆಕೆಗೆ 2,77,656 ಡಾಲರ್ ದಂಡ ಪಾವತಿಸುವಂತೆ ಡಾಲರ್ ಜನರಲ್ ಸ್ಟೋರ್ ಗೆ ಸೂಚಿಸಲಾಗಿದೆ.