ಬಾಲಿವುಡ್ ಬೇಬೋ ಕರೀನಾ ಕಪೂರ್, ಗರ್ಭಿಣಿಯಾದ ನಂತರವೂ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಗರ್ಭಿಣಿಯಾದರೂ ಸಾಕಷ್ಟು ಬ್ಯುಸಿಯಾಗಿರುವ ಕರೀನಾ ಈಗ ತಮ್ಮ ಮಗುವಿನ ಹೆಸರಿನ ಬಗ್ಗೆ ಹೇಳಿದ್ದಾರೆ.
ಅಮ್ಮನಾಗುವ ಖುಷಿಯಲ್ಲಿರುವ ಕರೀನಾ ಕಪೂರ್, ತನ್ನ ಪತಿ ಸೈಫ್ ನಮ್ಮ ಮಗುವಿಗೆ ಒಂದು ಕ್ಯೂಟ್ ಆಗಿರುವ ಹೆಸರನ್ನು ಆಯ್ಕೆ ಮಾಡಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲ ಸೈಫ್ ಗೆ ತಮ್ಮ ಬೇಬಿ ಬಂಪ್ ಲುಕ್ ತುಂಬ ಇಷ್ಟವೆಂಬುದನ್ನು ಕೂಡ ಕರೀನಾ ಹೇಳಿಕೊಂಡಿದ್ದಾರೆ. ಸೈಫ್ ಅವರಿಗೆ ಕರೀನಾ ಅವರ ಪ್ರೆಗ್ನೆನ್ಸಿ ಲುಕ್ ಎಷ್ಟು ಇಷ್ಟವಾಗಿದೆಯೆಂದರೆ ಅವರು ಕರೀನಾ ಅವರನ್ನು ಯಾವಾಗಲೂ ಗರ್ಭಿಣಿಯಾಗೇ ನೋಡಲು ಬಯಸುತ್ತಾರಂತೆ.
ಸೈಫ್ ಅವರಿಗೆ ‘ಸೈಫೀನಾ’ ಎಂಬ ಹೆಸರು ತುಂಬ ಇಷ್ಟವಾಗಿದೆ. ಹಾಗಾಗಿ ಸೈಫ್ ಹುಟ್ಟುವ ಮಗುವಿಗೆ ಇದೇ ಹೆಸರನ್ನು ಇಡಲು ಬಯಸಿದ್ದಾರೆ ಎಂದು ಬೇಬೋ ಹೇಳಿದ್ದಾರೆ.