ಕೂಲ್ ಕ್ಯಾಪ್ಟನ್ ಎಂ.ಎಸ್. ಧೋನಿ ಅಭಿಮಾನಿಗಳು ಕಾದುಕುಳಿತಿರುವ ದಿನ ಹತ್ತಿರವಾಗ್ತಿದೆ. ಇದೇ ಶುಕ್ರವಾರ ಅಂದ್ರೆ ಸೆಪ್ಟೆಂಬರ್ 30ರಂದು ಎಂ.ಎಸ್.ಧೋನಿ-ದಿ ಅನ್ಟೋಲ್ಡ್ ಸ್ಟೋರಿ ತೆರೆಗೆ ಬರ್ತಾ ಇದೆ. ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಹಾಗೆ ಧೋನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಶಾಂತ್ ಸಿಂಗ್ ರಜಪೂತ್,ಕೂಲ್ ಕ್ಯಾಪ್ಟನ್ ಕುಟುಂಬಕ್ಕೆ ಸಾಕಷ್ಟು ಹತ್ತಿರವಾಗಿದ್ದಾರೆ.
ಧೋನಿ ಜೀವನ ಚರಿತ್ರೆಯಾಧಾರಿತ ಚಿತ್ರದಲ್ಲಿ ಧೋನಿ ಪಾತ್ರಕ್ಕೆ ಜೀವ ತುಂಬಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ ಸುಶಾಂತ್. ಮಾಜಿ ಕ್ರಿಕೆಟರ್ ಕಿರಣ್ ಮೊರೆಯಿಂದ ಸಾಕಷ್ಟು ತರಬೇತಿ ಪಡೆದಿದ್ದರು ಸುಶಾಂತ್. ಕೇವಲ ಕ್ರಿಕೆಟೊಂದೇ ಅಲ್ಲ,ವೈಯಕ್ತಿಕ ಜೀವನದ ಬಗ್ಗೆ ಅರಿಯಲು ಧೋನಿ ಜೊತೆ ಸಾಕಷ್ಟು ಸಮಯ ಕಳೆದಿದ್ದಾರೆ ಸುಶಾಂತ್. ಹಾಗಾಗೆ ಸುಶಾಂತ್ ಹಾಗೂ ಧೋನಿ ಕುಟುಂಬದ ನಡುವೆ ಒಂದು ಸುಂದರ ಬಾಂಧವ್ಯ ಬೆಳೆದಿದೆ. ಧೋನಿ ಹಾಗೂ ಧೋನಿ ಮಗಳು ಜೀವಾ ಜೊತೆ ತೆಗೆದಿರುವ ಸುಂದರ ಫೋಟೋವನ್ನು ಸುಶಾಂತ್ ಇನ್ಸ್ಟ್ರಾಗ್ರಾಮ್ ಗೆ ಅಪ್ ಲೋಡ್ ಮಾಡಿದ್ದಾರೆ. ಹಾಗೆ ಚಿತ್ರದ ಪ್ರಮೋಷನ್ ನಲ್ಲಿ ಧೋನಿ ಹಾಗೂ ಸುಶಾಂತ್ ಬ್ಯುಸಿಯಿದ್ದಾರೆ.