ಲೂಧಿಯಾನ: ಮಗಳಿಗೆ ಬಲವಂತವಾಗಿ ಮಾದಕ ವಸ್ತು ನೀಡಿ, ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಕಾಮುಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಲೂಧಿಯಾನದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವ 70 ವರ್ಷ ವಯಸ್ಸಿನ ವ್ಯಕ್ತಿ ಬಂಧಿತ ಆರೋಪಿ. ಈತ ಸುಮಾರು 20 ವರ್ಷಗಳಿಂದ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಗಳಿಗೆ ತಾಯಿ ಇಲ್ಲವಾಗಿದ್ದು, ಮಲತಾಯಿಯಿಂದ ಕಿರುಕುಳ ಅನುಭವಿಸುತ್ತಿದ್ದಳು. ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಮಗಳಿಗೆ ಒತ್ತಾಯದಿಂದ ಮಾದಕ ವಸ್ತು ತಿನ್ನಿಸುತ್ತಿದ್ದ ಕಾಮುಕ, ಆಕೆ ಮತ್ತಿನಲ್ಲಿದ್ದ ಸಂದರ್ಭದಲ್ಲಿ ಅತ್ಯಾಚಾರ ಎಸಗುತ್ತಿದ್ದ.
ಮಗಳಿಗೆ 10 ವರ್ಷಗಳ ಹಿಂದೆ ಮದುವೆಯಾಗಿದ್ದು, ಕೆಲ ವರ್ಷಗಳಲ್ಲೇ ಗಂಡ ವಿಚ್ಛೇದನ ನೀಡಿದ್ದರಿಂದ ತವರು ಸೇರಿಕೊಂಡಿದ್ದಾಳೆ. ಮಗಳನ್ನು ರಕ್ಷಿಸಬೇಕಾದ ಅಪ್ಪನೇ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.