ರಿಲಾಯನ್ಸ್ ಜಿಯೋ ಸಿಮ್ ಅನೇಕರಿಗೆ ಕನಸಾಗಿದೆ. ಸಿಮ್ ಪಡೆಯಲು ಗ್ರಾಹಕರು ತಿಂಗಳುಗಟ್ಟಲೆ ಕಾಯಬೇಕಾಗಿದೆ.ಇದರಿಂದ ನಿರಾಸೆಯಾಗಬೇಕಾಗಿಲ್ಲ. ಕನಸಿನಲ್ಲಿ ಕಾಣ್ತಿದ್ದ ಸಿಮ್ ಆರಾಮವಾಗಿ ನಿಮ್ಮ ಕೈ ಸೇರಲಿದೆ. ಇದಕ್ಕಾಗಿ ನೀವು ರಿಲಾಯನ್ಸ್ ಶಾಪ್ ಮುಂದೆ ನಿಂತು ಕಾಲು ನೋವು ಮಾಡಿಕೊಳ್ಳಬೇಕಾಗಿಲ್ಲ. ನಿಮ್ಮ ಮನೆಗೆ ಸಿಮ್ ಡಿಲೆವರಿಯಾಗಲಿದೆ.
ಯಸ್,ವರದಿಯೊಂದರ ಪ್ರಕಾರ ಗ್ರಾಹಕರ ಮನೆಗೆ ಸಿಮ್ ತಲುಪಿಸುವ ಯೋಜನೆ ರೂಪಿಸ್ತಿದೆ ರಿಲಾಯನ್ಸ್. ಸದ್ಯದಲ್ಲಿಯೇ ಜಿಯೋ ಪೋರ್ಟಲ್ ಶುರುವಾಗಲಿದೆಯಂತೆ. ಅದ್ರಲ್ಲಿ ಗ್ರಾಹಕರು ಸಿಮ್ ಬುಕ್ ಮಾಡಬಹುದು. ಅವಶ್ಯವಿರುವ ದಾಖಲೆಗಳನ್ನು ನೀಡಿ ಸಿಮ್ ಬುಕ್ ಮಾಡಬೇಕು. ಬುಕ್ ಮಾಡಿದ 6-7 ದಿನಗಳಲ್ಲಿ ಸಿಮ್ ನಿಮ್ಮ ಮನೆಗೆ ಬರಲಿದೆ.
ಈ ಯೋಜನೆ ಕಾರ್ಯರೂಪಕ್ಕೆ ಬಂದ್ರೆ ಸಿಮ್ ಗ್ರಾಹಕರ ಮನೆಗೆ ತಲುಪಿಸಿದ ಮೊದಲ ಟೆಲಿಕಾಮ್ ಕಂಪನಿ ಎಂಬ ಹೆಗ್ಗಳಿಕೆಗೆ ರಿಲಾಯನ್ಸ್ ಜಿಯೋ ಪಾತ್ರವಾಗಲಿದೆ. ರಿಲಾಯನ್ಸ್ ಮೊದಲು ಮೆಟ್ರೋ ನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಆದ್ರೆ ಈ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ ಎಂದಿದ್ದಾರೆ ಹಿರಿಯ ಏಜೆಂಟ್ ಗಳು.