ಬಾಲಿವುಡ್ ಗಲ್ಲಿಯಲ್ಲೀಗ ಕರಣ್ ಜೋಹರ್ ನಿರ್ದೇಶನದ ‘ಯೇ ದಿಲ್ ಹೇ ಮುಷ್ಕಿಲ್’ ಚಿತ್ರದ ಬಗ್ಗೆ ಚರ್ಚೆಯಾಗ್ತಿದೆ. ರಣಬೀರ್ ಕಪೂರ್ ಹಾಗೂ ಐಶ್ವರ್ಯ ರೈ ಬಚ್ಚನ್ ನಡುವಿನ ರೋಮ್ಯಾನ್ಸ್ ಸಾಕಷ್ಟು ಸದ್ದು ಮಾಡಿದೆ.
ಚಿತ್ರದಲ್ಲಿ ಫವಾದ್ ಖಾನ್ ಹಾಗೂ ಅನುಷ್ಕಾ ಶರ್ಮಾ ಕೂಡ ನಟಿಸಿದ್ದಾರೆ. ಆದ್ರೆ ರಣಬೀರ್ ಕಪೂರ್ ಹಾಗೂ ಐಶ್ವರ್ಯ ರೈ ಬಗ್ಗೆಯೇ ಸಾಕಷ್ಟು ಚರ್ಚೆಯಾಗ್ತಿದೆ. ಚಿತ್ರದಲ್ಲಿ ಇಬ್ಬರು ಬೋಲ್ಡ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದಾರೆನ್ನಲಾಗ್ತಾ ಇದೆ. ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇದಕ್ಕೂ ಮುನ್ನ ರಿಲೀಸ್ ಆದ ಎರಡು ಹಾಡುಗಳಲ್ಲಿಯೂ ಇವರಿಬ್ಬರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇಂದು ಚಿತ್ರದ ಮತ್ತೆರಡು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದ್ರಲ್ಲಿ ರಣಬೀರ್ ಕಪೂರ್ ಹಾಗೂ ಐಶ್ವರ್ಯ ರೈ ಬಚ್ಚನ್ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.ಈ ಫೋಟೋ ನೋಡಿದ ಅಭಿಮಾನಿಗಳಿಗೆ ಆಶ್ವರ್ಯವಾಗೋದು ಗ್ಯಾರಂಟಿ. ಬ್ರೇಕ್ ನಂತ್ರ ಮತ್ತೆ ಬಂದ ಐಶ್ ಇಂತ ದೃಶ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಧರ್ಮ ಪ್ರೊಡಕ್ಷನ್ಸ್ ಮತ್ತು ಫಾಕ್ಸ್ ಸ್ಟುಡಿಯೋ ಬ್ಯಾನರ್ ಅಡಿ ನಿರ್ಮಾಣವಾಗಿರುವ ಈ ಚಿತ್ರ ದೀಪಾವಳಿಗೆ ಬಿಡುಗಡೆಯಾಗಲಿದೆ.