Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

22 ಸಾವಿರ ರೂ. ಗೆ ಸೇಲಾಯ್ತು ಬೃಹತ್ ಮೀನು..!

$
0
0
22 ಸಾವಿರ ರೂ. ಗೆ ಸೇಲಾಯ್ತು ಬೃಹತ್ ಮೀನು..!

ಶುಕ್ರವಾರದಂದು ಮುಂಬೈನ ವಸೈ ಕೋಳಿವಾಡಾ ಮಾರ್ಕೆಟ್ ನಲ್ಲಿ ಜನಜಂಗುಳಿಯೇ ನೆರೆದಿತ್ತು. ಮೀನುಗಾರರ ಬಲೆಗೆ ಬಿದ್ದಿದ್ದ ಈ ಬೃಹತ್ ಮೀನನ್ನು ನೋಡಲು ಮುಗಿ ಬಿದ್ದಿದ್ದ ಜನ, ಅದರ ಮುಂದೆ ಫೋಟೋ ತೆಗೆದುಕೊಂಡಿದ್ದಾರೆ.

ಬರೋಬ್ಬರಿ 300 ಕೆ.ಜಿ. ತೂಗುತ್ತಿದ್ದ 10 ಅಡಿ ಉದ್ದದ ಈ ಮೀನು 22 ಸಾವಿರ ರೂಪಾಯಿಗಳಿಗೆ ಮಾರಾಟವಾಗಿದೆ. ಗರ್ಭ ಧರಿಸಿದ್ದ ಈ ಮೀನು ಗುಜರಾತ್ ಕಡಲ ತೀರದಲ್ಲಿ ವಸೈ ಮೀನುಗಾರರ ಬಲೆಗೆ ಬಿದ್ದಿದ್ದು, ಇದನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ತಂದ ವೇಳೆ ನೆರೆದವರು ಇಷ್ಟು ಬೃಹತ್ ಗಾತ್ರದ ಮೀನನ್ನು ನೋಡುತ್ತಿರುವುದು ಇದೇ ಮೊದಲು ಎಂದು ಉದ್ಘರಿಸಿದ್ದಾರೆ.

ಆದರೆ ಈ ಮೀನು ಈಗ ಮೀನುಗಾರರ ಸಂಕಟಕ್ಕೂ ಕಾರಣವಾಗುವ ಸಾಧ್ಯತೆಯಿದೆ. ಪ್ರಾಣಿ ಪ್ರಿಯರು ಗರ್ಭ ಧರಿಸಿದ್ದ ಮೀನು ಬಲೆಗೆ ಬಿದ್ದ ವೇಳೆ ಅದನ್ನು ವಾಪಾಸ್ ಸಮುದ್ರಕ್ಕೆ ಬಿಡಬೇಕಿತ್ತು ಎಂದು ತಕರಾರು ತೆಗೆದಿದ್ದಾರೆ. ಅಲ್ಲದೇ ಈ ಮೀನನ್ನು ಹಿಡಿದವರ ವಿರುದ್ದ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>