Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಮತ್ತೊಂದು ಹೊಸ ಸುದ್ದಿ ನೀಡಿದ ‘ಕೋಟಿಗೊಬ್ಬ-2’

$
0
0
ಮತ್ತೊಂದು ಹೊಸ ಸುದ್ದಿ ನೀಡಿದ ‘ಕೋಟಿಗೊಬ್ಬ-2’

ಕಿಚ್ಚ ಸುದೀಪ್ ಅಭಿನಯದ, ಖ್ಯಾತ ನಿರ್ದೇಶಕ ಕೆ.ಎಸ್. ರವಿಕುಮಾರ್ ನಿರ್ದೇಶನದ ‘ಕೋಟಿಗೊಬ್ಬ-2’ ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣವಾಗಿ ಭರ್ಜರಿ ಯಶಸ್ಸು ಕಂಡಿದೆ.

ಸುದೀಪ್, ನಿತ್ಯಾ ಮೆನನ್ ಮೊದಲಾದವರು ಅಭಿನಯಿಸಿರುವ ಚಿತ್ರ ತಮಿಳಿನಲ್ಲಿ ‘ಮುಡಿಂಜಾ ಇವಾನ್ ಪುಡಿ’ ಹೆಸರಿನಲ್ಲಿ ನಿರ್ಮಾಣವಾಗಿತ್ತು. ಕನ್ನಡ, ತಮಿಳಿನಲ್ಲಿ ಯಶಸ್ವಿಯಾದ ‘ಕೋಟಿಗೊಬ್ಬ-2’ ಗಳಿಕೆಯಲ್ಲೂ ದಾಖಲೆ ಬರೆದಿದೆ. ಚಿತ್ರದ ಹಿಂದಿ ರೈಟ್ಸ್ ಕೂಡ ಭಾರೀ ಮೊತ್ತಕ್ಕೆ ಸೇಲ್ ಆಗಿದೆ. ಈ ನಡುವೆ ಚಿತ್ರ ತಂಡದಿಂದ ಹೊಸ ಸುದ್ದಿಯೊಂದು ಹೊರ ಬಿದ್ದಿದೆ.

ಕನ್ನಡ, ತಮಿಳಿನಲ್ಲಿ ಯಶಸ್ವಿಯಾದ ‘ಕೋಟಿಗೊಬ್ಬ-2’ ತೆಲುಗಿಗೂ ಡಬ್ ಆಗಿದೆ. ಈಗಾಗಲೇ ಹಿಂದಿ, ತೆಲುಗು, ತಮಿಳು ಚಿತ್ರರಂಗದಲ್ಲಿ ಸುದೀಪ್ ಚಿರಪರಿಚಿತರಾಗಿದ್ದಾರೆ.

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಸುದೀಪ್ ‘ಈಗ’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದರು. ‘ಕೋಟಿಗೊಬ್ಬ-2’ ತೆಲುಗಿನಲ್ಲಿ ‘ಕೋಟಿಕೊಕ್ಕಡು’ ಹೆಸರಿನಲ್ಲಿ ರಿಲೀಸ್ ಆಗಲಿದೆ.

‘ಕೋಟಿಕೊಕ್ಕಡು’ ಕೂಡ ಕನ್ನಡ, ತಮಿಳು ಅವತರಣಿಕೆ ರೀತಿಯಲ್ಲೇ ಯಶಸ್ವಿಯಾಗುವ ನಿರೀಕ್ಷೆ ಇದ್ದು, ಸುದೀಪ್ ಈ ಚಿತ್ರದ ಮೂಲಕ ಸೌತ್ ಇಂಡಿಯಾ ಸ್ಟಾರ್ ಆಗಲಿದ್ದಾರೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>