ಕಾನ್ಪುರ್: ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ, ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 318 ರನ್ ಗಳಿಗೆ ಆಲ್ ಔಟ್ ಆಗಿದೆ.
ಮೊದಲ ದಿನ 9 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿದ್ದ ಭಾರತ ಇಂದು ಆಟ ಮುಂದುವರೆಸಿತು. ಉಮೇಶ್ ಯಾದವ್ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆರ್. ಜಡೇಜ ಅಜೇಯ 42 ರನ್ ಗಳಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 318 ರನ್ ಗಳಿಸಿತು. ಆಟ ಆರಂಭಿಸಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 47 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದೆ.
ಮಾರ್ಟಿನ್ ಗುಪ್ಟಿಲ್ 21 ರನ್ ಗಳಿಸಿ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಎಲ್.ಬಿ. ಬಲೆಗೆ ಬಿದ್ದರು. ಟಾಮ್ ಲೋಥಮ್ ಅಜೇಯ 56, ಕೇನ್ ವಿಲಿಯಮ್ ಸನ್ ಅಜೇಯ 65 ರನ್ ಗಳಿಸಿದ್ದಾರೆ.