ಸದ್ಯ ನಟ ಸಲ್ಮಾನ್ ಖಾನ್ ಕಬೀರ್ ಖಾನ್ ನಿರ್ದೇಶನದ ‘ಟ್ಯೂಬ್ ಲೈಟ್’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮನಾಲಿಯಲ್ಲಿ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ.
ಇದ್ರಿಂದಾಗಿ ಕೆಲ ಫ್ಯಾಮಿಲಿ ಫಂಕ್ಷನ್ ಗೂ ಹಾಜರಾಗಲು ಸಲ್ಮಾನ್ ಗೆ ಸಾಧ್ಯವಾಗಿರಲಿಲ್ಲ. ಇದೀಗ ಸಲ್ಮಾನ್ ಖಾನ್ ಜೊತೆ ಸಹೋದರಿ ಅರ್ಪಿತಾ, ಆಕೆಯ ಪತಿ ಆಯುಶ್ ಶರ್ಮಾ ಹಾಗೂ ಸಲ್ಲು ಸೋದರಳಿಯ ಆಹಿಲ್ ಕೂಡ ಮನಾಲಿಗೆ ತೆರಳಿದ್ದಾರೆ.
‘ಟ್ಯೂಬ್ ಲೈಟ್’ ಸೆಟ್ ನಲ್ಲಿ ಬಿಡುವಿನ ಸಮಯವನ್ನೆಲ್ಲ ಸಲ್ಮಾನ್ ತಮ್ಮ ಮುದ್ದಿನ ಅಳಿಯ ಪುಟಾಣಿ ಆಹಿಲ್ ಜೊತೆ ಕಳೆಯುತ್ತಿದ್ದಾರೆ. ಮಾವ, ಅಳಿಯನ ಆಟ- ತುಂಟಾಟದ ಕ್ಷಣಗಳನ್ನೆಲ್ಲ ಅರ್ಪಿತಾ ಖಾನ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಆಹಿಲ್ ಹಾಗೂ ಸಲ್ಮಾನ್ ಖಾನ್ ರ ಮುದ್ದಾದ ಫೋಟೋ ಒಂದನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.