Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಕೊನೆಗೂ ಸಿಕ್ಕಿ ಬಿದ್ರು ಖತರ್ನಾಕ್ ಕಳ್ಳಿಯರು

$
0
0
ಕೊನೆಗೂ ಸಿಕ್ಕಿ ಬಿದ್ರು ಖತರ್ನಾಕ್ ಕಳ್ಳಿಯರು

ಜನಸಂದಣಿ ಇರುವ ಸಂದರ್ಭಗಳಲ್ಲಿ ಅಲ್ಲಿಗೆ ತೆರಳಿ ಹಣ, ಅಭರಣ ದೋಚುತ್ತಿದ್ದ ಖತರ್ನಾಕ್ ಕಳ್ಳಿಯರ ಗ್ಯಾಂಗ್ ನ ಮೂವರು ಸದಸ್ಯರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮುಂಬೈನ ಸಿದ್ದಿವಿನಾಯಕ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರ ಹಣ ಹಾಗೂ ಮೊಬೈಲ್ ದೋಚಿದ್ದ ಈ ಮಹಿಳೆಯರ ಗ್ಯಾಂಗ್ ನ ಮೂವರು ಈಗ ಸಿಕ್ಕಿ ಬಿದ್ದಿದ್ದಾರೆ. ಎರಡು ತಂಡವಾಗಿ ಇವರು ದುಷ್ಕೃತ್ಯ ನಡೆಸ್ತಾ ಇದ್ರು. ಬಂಧಿತರನ್ನು ಅಹಮದಾಬಾದ್ ನ ಧನಲಕ್ಷ್ಮಿ ಪರ್ಮರ್, ಜ್ಯೋತಿ ಪರ್ಮರ್ ಹಾಗೂ ಮಥುರಾದ ಕೌರ್ ಎಂದು ಗುರುತಿಸಲಾಗಿದೆ.

ಸಿದ್ದಿವಿನಾಯಕ ದೇವಸ್ಥಾನದಲ್ಲಿ ಹಬ್ಬದ ನಿಮಿತ್ತ ವಿಶಿಷ್ಟ ಹೂವುಗಳ ಅಲಂಕಾರ ಮಾಡಲಾಗಿದೆ ಅನ್ನೋ ಸುದ್ದಿ ಈ ಗ್ಯಾಂಗ್ ಗೆ ಗೊತ್ತಾಗಿತ್ತು. ಅದನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನರು ಬರ್ತಾರೆ ಅಂತಾ ಲೆಕ್ಕ ಹಾಕಿದ ಗ್ಯಾಂಗ್, ಕಳ್ಳತನಕ್ಕೆ ಸ್ಕೆಚ್ ಹಾಕಿದೆ. ಭಕ್ತರ ಬ್ಯಾಗ್ ತಪಾಸಣೆ ಮಾಡ್ತಾ ಇದ್ದ ಸ್ಕ್ಯಾನರ್ ಬಳಿ ನಿಂತು ಬ್ಯಾಗ್ ಗಳನ್ನು ಕದ್ದು ಪರಾರಿಯಾಗಿದ್ದಾರೆ.

ಈ ಬಗ್ಗೆ ಭಕ್ತರಿಂದ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಸಿಸಿ ಟಿವಿ ಫುಟೇಜ್ ಸಹಾಯದಿಂದ ಪೊಲೀಸರು ಕಳ್ಳಿಯರನ್ನು ಬಂಧಿಸಿದ್ದಾರೆ. ಬಂಧಿತರಿಂದ 3 ಮೊಬೈಲ್ ಹಾಗೂ 25,000 ನಗದು ವಶಪಡಿಸಿಕೊಳ್ಳಲಾಗಿದೆ. ಗ್ಯಾಂಗ್ ನ ಉಳಿದ ಸದಸ್ಯೆಯರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


Viewing all articles
Browse latest Browse all 103032

Trending Articles